ಹನುಮ ಭಕ್ತರಿಗೆ ಸಕಲ ಸೌಲಭ್ಯ

ಕೊಪ್ಪಳದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕುಡಾ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.
ಕೊಪ್ಪಳದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕುಡಾ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ರಾಜಶೇಖರ ಹಿಟ್ನಾಳ ಮಾಹಿತಿ
  • ಡಿ.2 ಮತ್ತು 3ರಂದು ಮಾಲೆ ವಿಸರ್ಜನೆ
  • ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ
ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿ.2 ಮತ್ತು 3ರಂದು ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮವಿದೆ. ಸುಮಾರು ಎರಡು ಲಕ್ಷ ಭಕ್ತರು ಬರುವ ನಿರೀಕ್ಷೆ ಇದ್ದು, ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ನಿಂದ ದಾರಿಯುದ್ದಕ್ಕೂ ಏಳು ಕಡೆ ಪ್ರಸಾದ, ವಸತಿ ಇನ್ನಿತರ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾಡಳಿತ ಅಗತ್ಯ ಪಾರ್ಕಿಂಗ್​, ದೀಪಾಲಂಕಾರ, ಪೂಜೆ, ಲೈವ್​ ಪ್ರಸಾರ, ಎಲ್​ಇಡಿ ಪರದೆ ಅಳವಡಿಸಿದೆ. ಸಹಾಯವಾಣಿ, ರೂಟ್​ ಮ್ಯಾಪ್​, ಪ್ರಸಾದ, ಕುಡಿವ ನೀರು ಕಲ್ಪಿಸಲಾಗಿದೆ. ಪ್ಲಾಸ್ಟಿಕ್​ ಸಂಪೂರ್ಣ ನಿಷೇಧಿಸಿದೆ. ಚೆಕ್​ ಪೋಸ್ಟ್​ನಲ್ಲಿ ಪ್ಲಾಸ್ಟಿಕ್​ ಪರಿಶೀಲಿಸಿ ಇದ್ದಲ್ಲಿ ವಶಕ್ಕೆ ಪಡೆಯಲಾಗುವುದು. ಮಾಲೆ ವಿಸರ್ಜಿಸುವವರಿಗೆ ವಸ್ತ್ರ ಹಾಕಲು ಪ್ರತ್ಯೇಕ ಸ್ಥಳ ಗುರುತಿಸಿದ್ದು ಅಲ್ಲೇ ಹಾಕಬೇಕೆಂದು ಮನವಿ ಮಾಡಿದರು.
ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ನಿಂದ ಕೊಪ್ಪಳದಿಂದ ಅಂಜನಾದ್ರಿಗೆ ಬರುವ ಮಾರ್ಗ ಮಧ್ಯದಲ್ಲಿ ಎಂಟು ಕಡೆ ಪಾದಯಾತ್ರಿ ಭಕ್ತರಿಗಾಗಿ ಪ್ರಸಾದ, ಕುಡಿವ ನೀರು, ಸ್ನಾನಟ್ಟ, ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 30 ಸಾವಿರ ಭಕ್ತರಿಗೆ ಆಗುವಷ್ಟು ವ್ಯವಸ್ಥೆ ಇರಲಿದೆ. ಡಿ.2ರ ರಾತ್ರಿಯಿಂದ ಡಿ.3ರ ಮಧ್ಯಾಹ್ನದವರೆಗೆ ಸೌಲಭ್ಯ ಲಭ್ಯವಿರಲಿದೆ. ಸಂಗಾಪುರದ ಕಣವೆ ಆಂಜನೇಯ ದೇವಾಲಯ, ದರ್ಗಾದೇವಿ ಬೆಟ್ಟ, ಹಿಟ್ನಾಳ ಕ್ರಾಸ್​, ಆನೆಗೊಂದಿ ಕೃಷ್ಣದೇವರಾಯ ವೃತ್ತ, ಸಣಾಪುರ ಐಬಿ, ಕಡ್ಡಿರಾಂಪುರ ಬಳಿ ಕೇಂದ್ರ ಇರಲಿವೆ ಎಂದು ತಿಳಿಸಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.

ಸೋಪು-ಶಾಂಪು ಬಳಸಬೇಡಿ

ಭಕ್ತರು ಸ್ನಾನಕ್ಕೆ ಸೋಪು, ಶಾಂಪು ಬಳಕೆ ಮಾಡಬಾರದು. ಇದರಿಂದ ಪರಿಸರಕ್ಕೆ ಹಾನಿ ಆಗಲಿದೆ. ನದಿ ನೀರು ಕಲುಷಿತವಾಗುವುದು. ಇದಕ್ಕಾಗಿ ಸ್ನಾನಟ್ಟಗಳ ಬಳಿ ಕಡಲೆ ಹಿಟ್ಟು ನೀಡಲಾಗುವುದು ಸ್ನಾನಕ್ಕೆ ಹಿಟ್ಟು ಬಳಕೆ ಮಾಡಬೇಕು. ಈ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸಬೇಕು ಎಂದು ಸಂಸದರು ಭಕ್ತರಿಗೆ ಮನವಿ ಮಾಡಿದರು.

ಅಥ್ಲೆಟಿಕ್​ ಅಸೋಸಿಯೇಷನ್​ ಕಿಲೋರ್ಸ್ಕರ್​, ಮುಕ್ಕುಂದ ಸುಮಿ, ಅಲ್ಟ್ರಾಟೆಕ್​ ಇತರ ಕಾರ್ಖಾನೆಗಳ ಸಹಯೋಗದಲ್ಲಿ ಆಯಾ ಗ್ರಾಮಗಳ ಜನರ ಸಹಕಾರದೊಂದಿಗೆ ಭಕ್ತರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಬಿಎಸ್​ಪಿಎಲ್​ ಕಂಪನಿ ನೆರವು ಪಡೆದಿಲ್ಲ. ಪಾತೀತವಾಗಿ ನಾವೆಲ್ಲ ಬಿಎಸ್​ಪಿಎಲ್​ ವಿರುದ್ಧವಾಗಿದ್ದೇವೆ. ಕಂಪನಿ ಆರಂಭ ಬೇಡವೆಂಬುದು ನಮ್ಮ ನಿಲುವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net