ಸಂಸ್ಕಾರ-ಸಂಸ್ಕೃತಿಯ ಪ್ರತೀಕ ತಾಯಿ

ದಮ್ಮೂರು ಗ್ರಾಮದ ಶ್ರೀಭೀಮಾಂಬಿಕಾ ದೇವಿ ಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚನ್ನಮ್ಮ ಪಾಟೀಲ್ ಮಾತನಾಡಿದರು.ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪದಾನಕ್ಕೆ, ಹುಲುಗಪ್ಪ ಬಂಡಿವಡ್ಡರ, ಮಹೇಶ ಕಟಗೇರಿ, ಭೀಮಣ್ಣ ಹವಳಿ, ಈರಪ್ಪ ರ‌್ಯಾವಣಕಿ, ಡಿ.ಮೌನೇಶ ಬಡಿಗೇರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾತೃ
  • ದೇವೋ ಭವ
  • ಗೋಷ್ಠಿಯಲ್ಲಿ
ಯಲಬುರ್ಗಾ: ತಂದೆ-ತಾಯಿಗಳೇ ನಿಜವಾದ ದೇವರು. ಅವರನ್ನು ನಾವು ಪ್ರೀತಿಯಿಂದ ಕಾಣಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚನ್ನಮ್ಮ ಪಾಟೀಲ್ ಹೇಳಿದರು.
ದಮ್ಮೂರು ಗ್ರಾಮದಲ್ಲಿ ಶನಿವಾರ ರಾತ್ರಿ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಆಯೋಜಿಸಿದ್ದ ಮಾತೃ ದೇವೋ ಭವ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು.
ತಾಯಿ ಸಂಸ್ಕಾರ-ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿ ಬೆಳೆಸುತ್ತಾಳೆ. ಆದರೆ, ತಂದೆ ಆರ್ಥಿಕ ವೆಚ್ಚವನ್ನು ಭರಿಸುತ್ತಾನೆ. ಇವರಿಬ್ಬರ ಸೇವೆ ಅಪಾರವಾಗಿದೆ ಎಂದರು.
ಮಠದ ಒಡೆಯರಾದ ಹನುಮಂತಪ್ಪಜ್ಜ ಮಾತನಾಡಿ, ತಾಯಿ ತನ್ನ ಕಷ್ಟಗಳನ್ನು ಸಹಿಸಿಕೊಂಡು ತಾನು ಉಪವಾಸವಿದ್ದು ಹತ್ತು ಮಕ್ಕಳನ್ನು ಜೋಪಾನ ಮಾಡಿ ಬೆಳೆಸುತ್ತಾಳೆ. ಆದರೆ ಹತ್ತು ಮಕ್ಕಳು ಸೇರಿ ಒಬ್ಬ ತಾಯಿಯನ್ನು ಜೋಪಾನ ಮಾಡಲಾರದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ಬಸವರಾಜ ಪ್ರಭಣ್ಣನವರ, ಮಾಜಿ ಮಾಬುಸಾಬ ವಾಲಿಕಾರ, ಎಚ್.ಪಿ.ವಾಲಿಕಾರ, ಈರಣ್ಣ ಕಟಗೇರಿ, ಭೀಮಣ್ಣ ಚಿಕ್ಕಗೌಡ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net