ವಿವಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೋರೆರ್ ಶಿಲಾಸಮಾಧಿ, ನೆರಳಚ್ಚಿನ ಕಲಾಕೃತಿ ಮತ್ತು ಗವಿ ಚಿತ್ರಗಳನ್ನು ವೀಕ್ಷಿಸಿದರು. ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗುಡ್ಲಾನೂರರೊಂದಿಗೆ ಚರ್ಚಿಸಿದರು. ಮೋರೆರ್ ಬೆಟ್ಟಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದ್ದು, ಸ್ಮಾರಕಗಳನ್ನು ರಕ್ಷಿಸಬೇಕಿದೆ. ಪ್ರವಾಸೋದ್ಯಮ ಪೂರಕವಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಸಂಶೋಧನೆ, ರಕ್ಷಣಾ ಕಾರ್ಯಗಳು ಮತ್ತು ಸುಗಮ ಮಾರ್ಗ ಸೇರಿ ಹಲವು ಕಾಮಗಾರಿ ತ್ವರಿತಗತಿಯಲ್ಲಾಗಬೇಕಿದ್ದು, ರೋಪ್‌ವೇ ಕಾಮಗಾರಿಗೂ ಆದ್ಯತೆ ನೀಡಬೇಕಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಗಮನಕ್ಕೆ ತರಲಾಗುವುದು. ಇತಿಹಾಸದ ನೆಲೆ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಂರಕ್ಷಿಸಬೇಕಿದೆ ಎಂದರು.