ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾಜ ಸೇವಕ ರವಿಕುಮಾರ್ ಹಿರೇಮಠ, ಕೋರ್ಸ್ ಮುಖ್ಯ ಸಂಚಾಲಕ ಚಂದ್ರಶೇಖರ ತುಮ್ಮರಗುದ್ದಿ,ಪ್ರಮುಖರಾದ ಸುರೇಶ ಬೇವಿನಕಟ್ಟಿ, ಶರಣಪ್ಪ ಕಟ್ಟಿಮನಿ ಇದ್ದರು.
ಕುಷ್ಟಗಿ: ಆಧುನಿಕ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ. ಕಲಿಕಾ ಹಂತದಲ್ಲೇ ನೈತಿಕ ಶಿಕ್ಷಣ ನೀಡುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ ಎಂದು ಸಮಾಜ ಸೇವಕ ರವಿಕುಮಾರ್ ಹಿರೇಮಠ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್‌ಟಿಸಿ ಹಾಗೂ ಎನ್‌ಟಿಟಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋರ್ಸ್ ಮುಖ್ಯ ಸಂಚಾಲಕ ಚಂದ್ರಶೇಖರ ತುಮ್ಮರಗುದ್ದಿ ಮಾತನಾಡಿ, ಎಟಿಸಿ ಹಾಗೂ ಎನ್‌ಟಿಟಿ ಶಿಕ್ಷಣದ ಮಹತ್ವವನ್ನು ತಿಳಿಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಹೊರ ಹೊಮ್ಮಬೇಕು ಎಂದರು.