ಮಾಸಾಶನಕ್ಕೆ ಆದಾಯ ಮಿತಿ ನಿಗದಿ ಸರಿಯಲ್ಲ

ಮಾಸಾಶನ ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಾಧ್ಯಕ್ಷ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಯಲ್ಲಪ್ಪ ವಡ್ಡರಹಟ್ಟಿ, ಡಾ.ಆಶೋಕ ಡಂಬರ್ ಇತರರಿದ್ದರು.
ಮಾಸಾಶನ ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಾಧ್ಯಕ್ಷ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಯಲ್ಲಪ್ಪ ವಡ್ಡರಹಟ್ಟಿ, ಡಾ.ಆಶೋಕ ಡಂಬರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಂಗಾವತಿಯಲ್ಲಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಪ್ರತಿಭಟನೆ
ಗಂಗಾವತಿ: ಮಾಸಾಶನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಸಿಬಿಎಸ್ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಸೋಮವಾರ ಪ್ರತಿಭಟನಾ ರ‌್ಯಾಲಿ ನಡೆಸಿ ಗ್ರೇಡ್ ತಹಸೀಲ್ದಾರ್ ಷಣ್ಮುಖಪ್ಪಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಬಸವರಾಜ ಗೋನಾಳ್ ಮಾತನಾಡಿ, ಅಂಗವಿಕಲರಿಗೆ ನೀಡುವ ಮಾಸಾಶನ ಹಲವು ತಿಂಗಳಿಂದ ಸ್ಥಗಿತಗೊಂಡಿದ್ದು, ಮಾಸಾಶನಕ್ಕೆ ಆದಾಯ ಮಿತಿ ನಿಗದಿಪಡಿಸಿರುವುದು ಖಂಡನೀಯ. ಮಾಸಾಶನ ಸ್ಥಗಿತದಿಂದ ಆರೋಗ್ಯ ಮತ್ತು ಇತರ ಖರ್ಚುಗಳಿಗೆ ಪರವಾಲಂಬಿಗಳಾಗುವ ಸ್ಥಿತಿ ಬಂದಿದೆ. ಆದಾಯ ಮಿತಿ 32ಸಾವಿರ ರೂ. ನಿಗದಿಪಡಿಸಿದ್ದು ಅವೈಜ್ಞಾನಿಕವಾಗಿದ್ದು, ಬಿಪಿಎಲ್ ಕಾರ್ಡುದಾರರಿಗೆ 1.20ಲಕ್ಷ ರೂ. ನಿಗದಿಯಾಗಿದೆ.
ಅಂಗವೈಕಲ್ಯದಿಂದ ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆಯ ಅವಕಾಶಗಳಿಂದ ವಂಚಿತರಾಗಿದ್ದು, ಮಾಸಾಶನಕ್ಕೂ ಕೊಕ್ಕೆ ಹಾಕುತ್ತಿರುವುದು ಸರಿಯಲ್ಲ. ಮಾಸಾಶನ ಕಲ್ಯಾಣ ಯೋಜನೆಯಲ್ಲ, ಗೌರವಯುತ ಬದುಕಿನ ಹಕ್ಕಿನ ಭಾಗವಾಗಿದೆ. ಆದಾಯ ಮಿತಿ ರದ್ದುಪಡಿಸುವುದು, ಮಾಸಾಶನ 10ಸಾವಿರ ರೂ.ಗೆ ಹೆಚ್ಚಿಸುವುದು, ಗ್ರಾಮೀಣ, ನಗರ ಮತ್ತು ತಾಲೂಕು ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರ ಕಾಯಂಗೊಳಿಸುವುದು, ಕಲ್ಯಾಣ ಯೋಜನೆಗೆ 5ಲಕ್ಷ ರೂ. ನೆರವು, ಆಧಾರ್ ಯೋಜನೆಯಡಿ ಸಾಲ 3ಲಕ್ಷ ರೂ.ಗೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಯಲ್ಲಪ್ಪ ವಡ್ಡರಹಟ್ಟಿ, ಡಾ.ಆಶೋಕ ಡಂಬರ್, ರಾಘವೇಂದ್ರ ಸಿದ್ದಿಕೇರಿ, ಹುಸೇನಪ್ಪ, ಖಾದರ್‌ಬಾಷಾ, ದಾವಲ್‌ಸಾಬ್, ಕೆ.ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net