ಅಮ್ಮಾ ಸೆಖೆ ಆಗ್ತಿದೆ ನೋಡಮ್ಮ

ಮನೆಯಿಂದ ್ಯಾನ್ ತಂದು ಮಗುವಿನ ಆರೈಕೆ ಮಾಡುತ್ತಿರುವುದು.
ಮನೆಯಿಂದ ್ಯಾನ್ ತಂದು ಮಗುವಿನ ಆರೈಕೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಎಸಿ
  • ರಿಪೇರಿಗೆ
  • ವೈದ್ಯರು
ಕೊಪ್ಪಳ: ಬಿಸಿಲಿನ ಧಗೆಗೆ ಯುವಕರೇ ಉಸ್ಸಪ್ಪಾ ಎನ್ನುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗದಲ್ಲಿ ಎಸಿ, ್ಯಾನ್ ಕೆಟ್ಟು 20ದಿನಗಳಾದರೂ ವೈದ್ಯರು ಕಣ್ಣೆತ್ತಿ ನೋಡುತ್ತಿಲ್ಲ. ಒಂದೆಡೆ ಕಾಯಿಲೆ ಬಾಧೆ, ಮತ್ತೊಂದೆಡೆ ಸೆಖೆಯಿಂದ ಮಕ್ಕಳು ಪಡುವ ಸಂಕಟ ನೋಡದೆ ಪಾಲಕರು ಮನೆಯಿಂದಲೇ ್ಯಾನ್ ಹೊತ್ತು ತಂದು ಆರೈಕೆ ಮಾಡುವ ದುಸ್ಥಿತಿ ಬಂದೊದಗಿರುವುದು ವಿಪರ್ಯಾಸ.
ರಾಜ್ಯದಲ್ಲಿ ಬೇಸಿಗೆ ಪ್ರಮಾಣ ದಿನಕಳೆದಂತೆ ಏರುತ್ತಿದೆ. ಅದರಲ್ಲೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಉಳಿದೆಡೆಗಿಂತ ಕೊಂಚ ಹೆಚ್ಚೇ ಇದೆ. ಕೊಪ್ಪಳದಲ್ಲೂ ಈಗಾಗಲೇ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹೀಟ್ ವೇವ್ ಜನರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡುತ್ತಿದೆ. ಮಕ್ಕಳು, ವೃದ್ಧರು ಸೇರಿ ಯುವಕರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಿರ್ಜಲೀಕರಣ, ತಲೆ ಸುತ್ತು, ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತಿದೆ.
ಹೀಟ್ ವೇವ್ ಪ್ರಕಣಗಳ ಆರೈಕೆಗೆ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಿರ್ಮಿಸಿರುವುದು ಕೊಂಚ ಸಮಾಧಾನದ ಸಂಗತಿ. ಆದರೆ, ಸಾಮಾನ್ಯ ವಾರ್ಡ್‌ಗಳಲ್ಲಿ ಸೌಲಭ್ಯ ಮರಿಚಿಕೆಯಾಗುತ್ತಿವೆ. ಅದರಲ್ಲೂ ಮಕ್ಕಳ ವಿಭಾಗ ದೇವರಿಗೆ ಪ್ರೀತಿ ಎಂಬಂತಾಗಿದೆ. ತೀವ್ರ ನಿಗಾ ಟಕದಲ್ಲಿ ಕಳೆದ 20ದಿನಗಳಿಂದ ಎಸಿ ವ್ಯವಸ್ಥೆ ಕೆಟ್ಟು ಹೋಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮಗಳು ಸೆಖೆಯಲ್ಲಿ ಬೇಯುವಂತಾಗಿದೆ.
ಐಸಿಯು ವಾರ್ಡ್‌ಗಳೆಂದರೆ ಅಲ್ಲಿನ ಹವಾ ನಿಯಂತ್ರಣದಲ್ಲಿರಬೇಕು. ಮೂರು ವಾರ್ಡ್‌ಗಳಲ್ಲಿನ ಎಸಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ತಾಂತ್ರಿಕ ಕಾರಣಗಳಿಂದ ವಾರ್ಡ್ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಹೊರಗಿನ ಗಾಳಿಯೂ ಒಳಬರದಂತಾಗಿದೆ. ಒಂದು ವಾರ್ಡ್‌ನಲ್ಲಿ ತಲಾ 6 ಬೆಡ್‌ಗಳಿದ್ದು, ಅಷ್ಟೂ ಮಕ್ಕಳಿಗೆ ಕೇವಲ ಒಂದು ಟೇಬಲ್ ಫ್ಯಾನ್ ವ್ಯವಸ್ಥೆ ವಾಡಲಾಗಿದೆ. ಬಿಸಲಿನ ತಾಪಕ್ಕೆ ಗಾಳಿಯೂ ಬಿಸಿಯಾಗುತ್ತಿದ್ದು ್ಯಾನ್ ಅಳವಡಿಕೆಯಿಂದ ಇದ್ದ ನೆಮ್ಮದಿಯೂ ಹಾಳಾಗುತ್ತಿದೆ.
ಸಿಬ್ಬಂದಿ ಸುಖ-ರೋಗಿಗಳಿಗೆ ದುಃಖ
ರೋಗಿಗಳಿಗೆ 6ಬೆಡ್ ನಡುವೆ ಒಂದು ್ಯಾನ್ ಇಟ್ಟರೆ, ಸಿಬ್ಬಂದಿ ತಮ್ಮ ಟೇಬಲ್‌ಗೆ ಎರಡು ್ಯಾನ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾವು ಸುಖವಾಗಿದ್ದು ರೋಗಿಗಳು ಮತ್ತವರ ಕಡೆಯವರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಸಾಮಾನ್ಯ ವಾರ್ಡ್‌ನಲ್ಲೂ ್ಯಾನ್‌ಗಳಿಲ್ಲ. ಮಕ್ಕಳ ಪಾಲಕರು ಸ್ವತಃ ತಾವೇ ಮನೆಯಿಂದ ಟೇಬಲ್ ಫ್ಯಾನ್, ಹ್ಯಾಂಡ್ ಫ್ಯಾನ್‌ಗಳನ್ನು ತಂದು ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಜಿಲ್ಲೆಗೆ ವಾದರಿಯಾಗಬೇಕಾದ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಬಿರು ಬೆಸಿಗೆಯಲ್ಲಿ ಮಕ್ಕಳ ಐಸಿಯು ಮತ್ತು ಚಿಣ್ಣರ ಜನರಲ್ ವಾರ್ಡ್‌ಗಳಲ್ಲಿ ತಂಪಾದ ವಾತವರಣ ನೀಡಬೇಕಾಗಿರುವುದು ಆಸ್ಪತ್ರೆಯ ಕರ್ತವ್ಯ. ಆದರೆ, ಮಾನವೀಯತೆ ಮರೆತು ಸಿಬ್ಬಂದಿ ನಡೆದುಕೊಳ್ಳುತ್ತಿರುವುದು ದುರಂತ.
"

ನನ್ನ ಮಗಳಿಗೆ ಎರಡು ತಿಂಗಳಿಂದ ಹುಷಾರ್ ಇಲ್ಲದ ಕಾರಣ 8ದಿನಗಳಿಂದ ಪಿಐಸಿಯುನಲ್ಲಿಡಲಾಗಿದೆ. ಇಲ್ಲಿ ಸೂಕ್ತ ಗಾಳಿ ಇಲ್ಲದೆ ಮಗಳು ಹುಷಾರ್ ಆಗುತ್ತಿಲ್ಲ. ಬೇಸಿಗೆ ಇರುವ ಕಾರಣ ತುಂಬಾ ಸೆಖೆಯಾಗುತ್ತಿದೆ. ಆರು ಬೇಡ್‌ಗಳ ನಡುವೆ ಒಂದು ಫ್ಯಾನ್ ನೀಡಲಾಗಿದೆ. ಅದು ಸಹ ಬಿಸಿಗಾಳಿ ಬರುತ್ತದೆ. ಮಗು ತುಂಬಾ ಕಿರಿಕಿರಿ ವಾಡುತ್ತಿದೆ.

"

ನಾನು ಭಾರತೀಯ ಸೇನೆಯಲ್ಲಿ ಕೆಲಸ ವಾಡುತ್ತೇನೆ. ಮಗಳಿಗೆ ಆರಾಮ್ ಇಲ್ಲವೆಂದು ಬಂದಿದ್ದೇನೆ. ಮಗಳನ್ನು ಐದು ದಿನದಿಂದ ಪಿಐಸಿಯುನಲ್ಲಿ ಇರಿಸಲಾಗಿತ್ತು. ಅಲ್ಲಿ ಎಸಿ ಕೆಟ್ಟು ಹೋಗಿದೆ. ನಾನು ಮನೆಯಿಂದಲೇ ಫ್ಯಾನ್ ತಂದಿದ್ದೇನೆ. ಇವತ್ತು ಸಣ್ಣ ಮಕ್ಕಳ ಜನರಲ್ ವಾರ್ಡ್‌ಗೆ ಒತ್ತಾಯ ಪೂರಕವಾಗಿ ಮಗಳನ್ನು ಸಿಫ್ಟ್ ವಾಡಿದ್ದಾರೆ. ಇಲ್ಲಿಯೂ ಸಹ ಫ್ಯಾನ್ ಇಲ್ಲ. ಕುಡಿಯಲು ಸೂಕ್ತ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆಯೂ ಇಲ್ಲ. ಸಿದ್ಧನ ಗೌಡ

"

ಎಸಿ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ತಕ್ಷಣ ದುರಸ್ತಿ ಸಾಧ್ಯವಿಲ್ಲ. ಪಿಒಪಿ ತೆರವುಗೊಳಿಸಿ ಎಸಿ ರಿಪೇರಿ ಮಾಡಬೇಕಾಗುತ್ತದೆ. ಅದರಿಂದ ಮಕ್ಕಳಿಗೆ ತೊಂದರೆ ಆಗಬಹುದು. ಸದ್ಯಕ್ಕೆ ಫ್ಯಾನ್ ವ್ಯವಸ್ಥೆ ವಾಡಲಾಗಿದೆ. ರೋಗಿಗಳು ಕಡಿಮೆಯಾದ ಬಳಿಕ ಬಳ್ಳಾರಿಯಿಂದ ತಾಂತ್ರಿಕರನ್ನು ಕರೆಸಿ ದುರಸ್ತಿ ವಾಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net