ಕರ್ಕಿಹಳ್ಳಿ ಗ್ರಾಮಕ್ಕೆ ತೆರಳಿ ವಾಪಸ್ ಬರುವಾಗ ಟಿಪ್ಪರ್ ಕಂಡ ಹೇಮಲತಾ ತಡೆದು ವಿಚಾರಿಸಿದ್ದಾರೆ. ಈವೇಳೆ ಚಾಲಕರು ಯಾವುದೇ ಮಾಹಿತಿ ನೀಡಿಲ್ಲ. ಸ್ಥಳದಲ್ಲಿ ಜಮಾಯಿಸಿದ ಜನರು ನಿತ್ಯ ಹಲವು ಟಿಪ್ಪರ್ಗಳು ಹೂಳು ತುಂಬಿಕೊಂಡು ಓಡಾಡುತ್ತಿವೆ. ಇಟ್ಟಂಗಿ ಭಟ್ಟಿಗೆ ಸಾಗಿಸುತ್ತಿದ್ದಾರೆ. ರಸ್ತೆ ಹಾಳಾಗಿದ್ದು, ಧೂಳು ಬರುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಪರವಾನಗಿಯನ್ನೂ ಪಡೆದಿಲ್ಲವೆಂದು ಆರೋಪಿಸಿದ್ದಾರೆ. ಪರವಾನಗಿ ಪಡೆದು ಸಾಗಿಸುತ್ತಿರುವುದಾಗಿ ಹೇಳಿದ ಚಾಲಕರು ಅರೆಬರೆ ಮಾಹಿತಿ ನೀಡಿದ್ದಾರೆ. ಮುನಿರಾಬಾದ್ ಪಿಎಸ್ಐಗೆ ಕರೆ ಮಾಡಿದ ಎಂಎಲ್ಸಿ, ವಿಚಾರಿಸಿದ್ದಾರೆ. ಅವರು ಸರಿಯಾಗಿ ಸ್ಪಂದಿಸಿಲ್ಲ.