ನಗರದ ಪ್ರಮುಖ ವೃತ್ತ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಸಚಿವ ಶಿವರಾಜ ತಂಗಡಗಿ, ಶಾಸಕರಾದ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ, ಜನಾರ್ದನ ರೆಡ್ಡಿ, ಬಿಪ ಸದಸ್ಯೆ ಹೇಮಲತಾ ನಾಯಕ ಭಾವಚಿತ್ರ ಹಾಕಿಸಲಾಗಿದೆ. ’ಅಧಿವೇಶನದಲ್ಲಿ ಧ್ವನಿ ಎತ್ತಿ’ ಎಂಬ ಸಂದೇಶ ಬರೆದು ಆಗ್ರಹ ಮಾಡಲಾಗಿದೆ.