ವಿಬಿ ಜಿ ರಾಮ್​ ಜಿ ಬಗ್ಗೆ ಅಪಪ್ರಚಾರ

ಕೊಪ್ಪಳದಲ್ಲಿ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್​, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಇದ್ದರು.
ಕೊಪ್ಪಳದಲ್ಲಿ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್​, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮಹೇಶ ಟೆಂಗಿನಕಾಯಿ ಆರೋಪ
ಕೊಪ್ಪಳ: ಮನರೇಗಾ ಯೋಜನೆ ಬಲಪಡಿಸುವ ನಿಟ್ಟಿನಲ್ಲಿ ಜನಪರ ತಿದ್ದುಪಡಿ ತರಲಾಗಿದೆ. ವಿಕಸಿತ ಭಾರತಜಿ ರಾಮ್​ ಜಿ ಪರಿವರ್ತನೆ (ವಿಬಿ ಜಿ ರಾಮ್​ ಜಿ) ಎಂದು ಮರು ನಾಮಕರಣ ಮಾಡಿದ್ದು, ಅದನ್ನೇ ಕಾಂಗ್ರೆಸ್​ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಹೊಸ ತಿದ್ದುಪಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ. ಎಐ ಟೆಕ್ನಾಲಜಿ, ಬಯೋಮೆಟ್ರಿಕ್​ ಬಳಕೆ ಆಗಲಿದೆ. 125 ದಿನಗಳಿಗೆ ಕೂಳಿ ದಿನ ಹೆಚ್ಚಿಸಿದ್ದು, ರೈತರ ಸಂಕಷ್ಟದ ವಲಸೆ ತಡೆಯಲಿದೆ. ಕೃಷಿ ಚಟುವಟಿಕೆ ಮುಗಿದ ಮೇಲೆ ಕೆಲಸ ನೀಡಲಾಗುತ್ತದೆ. ಯೋಜನೆ ದುರ್ಬಳಕೆ ತಡೆದು ಸುಧಾರಣೆ ತರುವ ನಿಟ್ಟಿನಲ್ಲಿ ತಿದ್ದುಪಡಿ ಮಾಡಿದ್ದೇವೆ. ಸ್ವತ@ ಮಹಾತ್ಮ ಗಾಂಧಿ ಅವರು ರಾಮನ ಭಕ್ತರಾಗಿದ್ದರು. ಯೋಜನೆ ಜವಾಬ್ದಾರಿ ಹೊಣೆ ಹೊರುವ ನಿಟ್ಟಿನಲ್ಲಿ ಕೇಂದ್ರ&ರಾಜ್ಯದ ಸಹಭಾಗಿತ್ವದಲ್ಲಿ ಜಾರಿಗೆ ಯೋಜಿಸಿದ್ದೇವೆಂದು ಸಮರ್ಥಿಸಿಕೊಂಡರು.
ರಾಜೀವ್​ಗಾಂಧಿ, ಇಂದಿರಾಗಾಂಧಿ ಹಾಗೂ ಜವಾಹರ ಲಾಲ್​ ನೆಹರು ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು, ರಸ್ತೆ, ಕ್ರೀಡಾಂಗಣ ಇನ್ನಿತರ ಯೋಜನೆಗಳಿಗೆ ಹೆಸರಿಟ್ಟಿದ್ದಾರೆ. ಅಟಲ್​ ಬಿಹಾರಿ ವಾಜಪೇಯಿ ಅವರು ಜಾರಿ ಮಾಡಿದ ಅನೇಕ ಯೋಜನೆಗಳ ಹೆಸರು ಬದಲಾವಣೆ ಮಾಡಿದ್ದಾರೆ. ನಕಲಿ ಗಾಂಧಿಗಳ ಹೆಸರನ್ನೇ ಎಲ್ಲೆಡೆ ಇಟ್ಟಿದ್ದಾರೆ. ನಾವು ಯಾವುದನ್ನೂ ಪ್ರಶ್ನಿಸಿಲ್ಲ. ರಾಜ್ಯ ಸರ್ಕಾರ ಪ್ರತಿ ವಿಷಯಕ್ಕೂ ಕೇಂದ್ರದೊಂದಿಗೆ ಸಂರ್ಷ ನಡೆಸುತ್ತಿದೆ. ಸಮನ್ವಯತೆಯಿಂದ ನಡೆದುಕೊಳ್ಳಬೇಕು. ಗ್ಯಾರಂಟಿಯಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಅದನ್ನು ಮರೆಮಾಚಲು ಕೇಂದ್ರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್​, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಇತರರಿದ್ದರು.

ನಮ್ಮಲ್ಲಿ ಹೈಕಮಾಂಡ್​ ಸೂಚನೆಯಂತೆ ಎಲ್ಲ ನಡೆಯುತ್ತವೆ. ಬಳ್ಳಾರಿ ಬ್ಯಾನರ್​ ಗಲಾಟೆ ಘಟನೆ ಖಂಡಿಸಿ ಪಾದಯಾತ್ರೆ ಮಾಡುತ್ತೇವೆ. ಹೈಕಮಾಂಡ್​ ಅನುಮತಿ ಪಡೆದು ನಿರ್ಧರಿಸುತ್ತೇವೆ. ಕೋರ್​ ಕಮಿಟಿಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ. ಗೃಹಲಕ್ಷಿ$್ಮ ಯೋಜನೆಯಡಿ 1.24 ಕೋಟಿ ಲಾನುಭವಿಗಳಿಗೆ 5 ಸಾವಿರ ಕೋಟಿ ರೂ. ಪರಿಹಾರ ನೀಡುವ ಭರವಸೆ ನೀಡಿದೆ. ನೀಡಿದ್ದರೆ ಹೋರಾಟ ರೂಪಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net