ನನಗೆ ಹಿಟ್ನಾಳ ಸಹೋದರರ ಪರಿಚಯ ಆಗಿದ್ದು ಗಂಗಾವತಿಗೆ ಬಂದ ಮೇಲೆ. ಇಕ್ಬಾಲ್ ಅನ್ಸಾರಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಜನರ ಪ್ರೀತಿ, ವಿಶ್ವಾಸಕ್ಕೆ ಬೆಲೆ ನೀಡಿ ಗಂಗಾವತಿಗೆ ಬಂದಿರುವೆ. ನನಗೆ ಬಳ್ಳಾರಿ, ಗಂಗಾವತಿ ಎರಡೂ ಒಂದೇ. ಮುಂದೆಯೂ ಗಂಗಾವತಿಯಲ್ಲಿ ಸ್ಪರ್ಧೆ ಮಾಡುವೆ. ಅನ್ಸಾರಿ ಜೆಡಿಎಸ್, ಎಂಐಎಂಗೆ ಹೋಗ್ತಾರೊ ಗೊತ್ತಿಲ್ಲ. ಆದರೆ, ಹಿಟ್ನಾಳ ಬ್ರದರ್ಸ್ ಕೊಪ್ಪಳ ರಿಪಬ್ಲಿಕ್ ಮಾಡುತ್ತಾರೆ ಎಂದಿರುವುದು ಸತ್ಯ. ಅನ್ಸಾರಿ ಹಿಟ್ನಾಳ ಸಹೋದರರ ನೀರಿಳಿಸಲು ತೀರ್ಮಾನಿಸಿದಂತಿದೆ. ಇದರಿಂದ ನಮಗೆ ಲಾಭವಾಗಲಿದೆ. 2028ರಲ್ಲಿ ನಾನು ಗಂಗಾವತಿಯಿಂದಲೇ ಸ್ಪರ್ಧಿಸುವೆ ಎಂದು ರೆಡ್ಡಿ ಅನ್ಸಾರಿಗೆ ಟಾಂಗ್ ನೀಡಿದರು.