ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ

ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಗುರುವಾರ ಶಾಸಕ ದೊಡ್ಡನಗೌಡ ಪಾಟೀಲ್​ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್​, ತಾಲೂಕು ಅಧ್ಯಕ್ಷ ಲಂಕೇಶ ವಾಲಿಕಾರ, ಪ್ರಮುಖರಾದ ರವೀಂದ್ರ ಬಾಕಳೆ, ಚಂದಪ್ಪ ಹಕ್ಕಿ, ಶರಣಪ್ಪ ಲೈನದ, ಎಸ್​.ಜಿ.ಕಡೆಮನಿ, ದೇವಣ್ಣ ಬಳಿಗಾರ ಇದ್ದರು.
ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಗುರುವಾರ ಶಾಸಕ ದೊಡ್ಡನಗೌಡ ಪಾಟೀಲ್​ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್​, ತಾಲೂಕು ಅಧ್ಯಕ್ಷ ಲಂಕೇಶ ವಾಲಿಕಾರ, ಪ್ರಮುಖರಾದ ರವೀಂದ್ರ ಬಾಕಳೆ, ಚಂದಪ್ಪ ಹಕ್ಕಿ, ಶರಣಪ್ಪ ಲೈನದ, ಎಸ್​.ಜಿ.ಕಡೆಮನಿ, ದೇವಣ್ಣ ಬಳಿಗಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದೊಡ್ಡನಗೌಡ ಪಾಟೀಲ್​ ಕರೆ
  • ಆಮಂತ್ರಣ ಪತ್ರಿಕೆ ಬಿಡುಗಡೆ
ಕೊಪ್ಪಳ : ನಾಡು-ನುಡಿಗಾಗಿ ಕನ್ನಡ ಸಾಹಿತ್ಯ ಪರಿಷತ್​ ಶ್ರಮಿಸುತ್ತಿದ್ದು, ಜು.25, 26ರಂದು ಹಿರೇಮನ್ನಾಪುರದಲ್ಲಿ ನಡೆವ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ಶಾಸಕ ದೊಡ್ಡನಗೌಡ ಪಾಟೀಲ್​ ಕರೆ ನೀಡಿದರು.
ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಗುರುವಾರ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯ ರೈತರು, ಜನಪರ ಚಿಂತನೆ, 371 (ಜೆ) ಜಾರಿ ಕುರಿತ ವಿಶೇಷ ಉಪನ್ಯಾಸಗಳಿರಲಿವೆ. ಕವಿಗಳು, ಸಾಹಿತಿಗಳಿಗೆ ಸನ್ಮಾನ ಇರಲಿದೆ. ನನ್ನ ಕ್ಷೇತ್ರದಲ್ಲಿ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಸೇರಿ ಎಲ್ಲ ವರ್ಗದ ಜನ ಹೆಚ್ಚಾಗಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್​ ಮಾತನಾಡಿ, ಎರಡು ದಿನ ಸಮ್ಮೇಳನ ನಡೆಯಲಿದೆ. ಶಾಸಕ ದೊಡ್ಡನಗೌಡ ಪಾಟೀಲ್​, ಹಿರೇಮನ್ನಾಪುರ ಗ್ರಾಮಸ್ಥರ ಸಹಕಾರದಿಂದ ಅದ್ದೂರಿಯಾಗಿ ಆಚರಿಸಲಾಗುವುದು. ಶಿಕ್ಷಕರು, ಸಾಹಿತಿಗಳು, ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಸರ್ವಾಧ್ಯಕ್ಷರಾಗಿ ಶೇಖರಗೌಡಾ ಮಾಲಿ ಪಾಟೀಲ್​ ಆಯ್ಕೆಯಾಗಿದ್ದಾರೆ. ಖ್ಯಾತ ಸಾಹಿತಿ ಎಲ್​.ಹನುಮಂತಯ್ಯ ಸಮ್ಮೇಳನ ಉದ್ಘಾಟಿಸುವರು. ವಿವಿಧ ಸಾಧಕರು ಗೋಷ್ಠಿಯಲ್ಲಿ ಭಾಗಿಯಾಗುವರು ಎಂದು ವಿವರಿಸಿದರು.
ಕುಷ್ಟಗಿ ತಾಲೂಕು ಕಸಾಪ ಅಧ್ಯಕ್ಷ ಲಂಕೇಶ ವಾಲಿಕಾರ ಮಾತನಾಡಿದರು. ಪ್ರಮುಖರಾದ ರವೀಂದ್ರ ಬಾಕಳೆ, ಚಂದಪ್ಪ ಹಕ್ಕಿ, ಶರಣಪ್ಪ ಲೈನದ, ಎಸ್​.ಜಿ.ಕಡೆಮನಿ, ದೇವಣ್ಣ ಬಳಿಗಾರ, ನಾಗರಾಜ ಬಡಿಗೇರ, ಮಂಜುನಾಥ ಗುಳೆದಗುಡ್ಡ, ಹನಮೇಶ ಗುಮಗೇರಿ, ಶಿವಾನಂದ ಹಿರೇಮಠ, ಬಸವರಾಜ ಉಪ್ಪಲದಿನ್ನಿ, ಪರಶೀವ ಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net