ಗಂಗಾವತಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಗಂಗಾವತಿ ಸಿಬಿಎಸ್ ವೃತ್ತದಲ್ಲಿ ಸಿಪಿಐ(ಎಂ)ಪಕ್ಷ ಗುರುವಾರ ಪ್ರತಿಭಟನೆ ನಡೆಸಿತು. ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಮಂಜುನಾಥ್ ಡಗ್ಗಿ, ಹುಸೇನಪ್ಪ, ಗಿರಿಜಮ್ಮ ದುರ್ಗಮ್ಮ ಹೊಸ್ಕೆರಾ, ನಾಗರಾಜ, ಮುತ್ತಣ್ಣ ಇತರರಿದ್ದರು.
ಗಂಗಾವತಿ ಸಿಬಿಎಸ್ ವೃತ್ತದಲ್ಲಿ ಸಿಪಿಐ(ಎಂ)ಪಕ್ಷ ಗುರುವಾರ ಪ್ರತಿಭಟನೆ ನಡೆಸಿತು. ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಮಂಜುನಾಥ್ ಡಗ್ಗಿ, ಹುಸೇನಪ್ಪ, ಗಿರಿಜಮ್ಮ ದುರ್ಗಮ್ಮ ಹೊಸ್ಕೆರಾ, ನಾಗರಾಜ, ಮುತ್ತಣ್ಣ ಇತರರಿದ್ದರು.
Published on
ಗಂಗಾವತಿ: ಅಖಿಲ ಭಾರತ ಮುಷ್ಕರ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ಗುರುವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಘಟನೆಗಳು ವಿವಿಧ ವೃತ್ತದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದವು.
ಗುರುವಾರ ವಾರದರಜೆಯಾಗಿದ್ದರಿಂದ ಸಾಮಾನ್ಯ ಮಾರುಕಟ್ಟೆ ಬಂದ್ ಆಗಿತ್ತು. ವಾಹನ ಸಂಚಾರ ಎಂದಿನಂತಿದ್ದು, ಸಣ್ಣಪುಟ್ಟ ಅಂಗಡಿಗಳನ್ನು ಕಾರ್ಮಿಕರು ಬಂದ್ ಮಾಡಿಸಿದರು. ಸ್ವಯಂಪ್ರೇರಿತರಾಗಿ ಯಾರೂ ಬಂದ್ ಮಾಡಲಿಲ್ಲ. ನಗರದ ಸಿಬಿಎಸ್ ವೃತ್ತದಲ್ಲಿ ಸಂಚಾರ ತಡೆ ನಡೆಸಿ ಪ್ರತಿಭಟಿಸಿದ ಸಿಪಿಐ(ಎಂ), ಸಿಐಟಿಯು ಸಂಘಟನೆ ಕಾರ್ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಮಿಕ-ರೈತ-ಕೂಲಿಕಾರ ಅಂಗನವಾಡಿ, ಬಿಸಿಯೂಟ ಆಟೋ, ಲಾರಿ ಚಾಲಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, 4 ಕಾರ್ಮಿಕ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕಿದ್ದು, ನರೇಗಾ ಯೋಜನೆ ಮರುಸ್ಥಾಪಿಸಿ ದಿನಕ್ಕೆ 600 ರೂ. ಕೂಲಿ, 200 ದಿನ ಕೆಲಸ ಖಾತ್ರಿ ನೀಡಬೇಕೆಂದು ಒತ್ತಾಯಿಸಿದರು.
ವಿದ್ಯುತ್ ತಿದ್ದುಪಡಿ, ವಿಮಾ, ಭೂಸ್ವಾಧೀನ ಕಾಯ್ದೆ ರದ್ದುಗೊಳಿಸಬೇಕು. ರಾಜ್ಯ ಸರ್ಕಾರ ಲೇಬರ್ ಕೋಡ್‌ಗಳಿಗೆ ನಿಯಮಾವಳಿ ರೂಪಿಸಬಾರದು. ಎಲ್ಲ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಕನಿಷ್ಠ ವೇತನ 41 ಸಾವಿರ ರೂ. ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಮಂಜುನಾಥ್ ಡಗ್ಗಿ, ಹುಸೇನಪ್ಪ, ಗಿರಿಜಮ್ಮ ದುರ್ಗಮ್ಮ ಹೊಸ್ಕೆರಾ, ನಾಗರಾಜ, ಮುತ್ತಣ್ಣ ಇತರರಿದ್ದರು.
ವಿವಿಧೆಡೆ ಹೋರಾಟ: ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಎಐಟಿಯುಸಿ ತಾಲೂಕು ಘಟಕ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿತು. ಜೆಸ್ಕಾಂ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ತಾಲೂಕು ಘಟಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿತು. ತಾಲೂಕಿನ ದಾಸನಾಳ ಬ್ರಿಡ್ಜ್ ಬಳಿ ಪ್ರಾಂತ ರೈತ ಸಂಘ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net