ಎರಡನೇ ಬೆಳೆಗೆ ನೀರು ಕೊಡುವಂತೆ ವಿಪಕ್ಷದವರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ವಾಟರ್ ಬೋರ್ಡ್ ಒಂದೇ ಬೆಳೆಗೆ ನೀರು ಹರಿಸಲು ನಿರ್ಧರಿಸಿದೆ. ನಾನು ನಿರ್ಧರಿಸಿದ್ದಲ್ಲ. ಕೇಂದ್ರ ಸರ್ಕಾರ ಇದನ್ನು ಮಾಡಿದೆ. ಜನರ ದಾರಿ ತಪ್ಪಿಸುವ ಬದಲು ಸೆಂಟ್ರಲ್ ಬೋರ್ಡ್ಗೆ ಮನವಿ ಮಾಡಿ ನೀರು ಕೊಡಿಸಿ. ನಾವೂ ಒತ್ತಾಯ ಮಾಡುತ್ತೇವೆ. ನಮಗೆ ನೀರು ಕೊಡಬಾರದೆಂದ ಉದ್ದೇಶವಿಲ್ಲ. ಸದ್ಯ ಜಲಾಶಯಕ್ಕೆ ನೀರು ಬರುತ್ತಿದೆ ನಿಜ. ಒಂದು ಬೆಳೆಗೆ 60 ಟಿಎಂಸಿ ಅಡಿ ನೀರು ಬೇಕು. 80ರಲ್ಲಿ 52 ಟಿಎಂಸಿ ನಮ್ಮ ಪಾಲು. ಅದರಲ್ಲಿ ಆವಿ ಪ್ರಮಾಣ, ಕುಡಿವ ನೀರು, ಸಿಸ್ಟಂಲಾಸ್ ಸೇರಿ ಇನ್ನಿತರ ಕಾರಣಗಳಿಗೆ 10 ಟಿಎಂಸಿ ಲಾಸ್ ಆಗಲಿದೆ. ನವೆಂಬರ್ ಬಳಿಕ ಆಂಧ್ರ ತನ್ನ ಪಾಲಿನ ನೀರು ಬಿಡುಗಡೆಗೆ ಬೇಡಿಕೆ ಸಲ್ಲಿಸಿದೆ ಎಂದರು.