ಗಂಗಾವತಿಯಲ್ಲಿ ಕನ್ನಡ ಗಾನಕೋಗಿಲೆ ಸಂಗೀತ ಕಾರ್ಯಕ್ರಮವನ್ನು ಗಂಗಾವತಿ ಬೀಚಿ ಬಿ.ಪ್ರಾಣೇಶ ಭಾನುವಾರ ಉದ್ಘಾಟಿಸಿದರು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಇತರರಿದ್ದರು.
ಗಂಗಾವತಿ: ಸಂಗೀತ-ಕಲೆಯಿಂದ ಮಾನಸಿಕ ನೆಮ್ಮದಿ ಸಿಗಲಿದ್ದು, ಕಲಾವಿದರಿಗೆ ಪ್ರೋತ್ಸಾಹ ದೊರೆಯಬೇಕಿದೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಪರಿಸರ ಸೇವಾ ಟ್ರಸ್ಟ್ ಮತ್ತು ಹಿರೇಬೆಣಕಲ್ ಮೋರೇರ್ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡ ಕನ್ನಡ ಗಾನಕೋಗಿಲೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರೀರ ಮತ್ತು ಶಾರೀರ ಸದೃಢಕ್ಕೆ ಸಂಗೀತ ಕಲೆ ಪೂರಕವಾಗಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದ ಕುರಿತು ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗುಡ್ಲಾನೂರ್ ಮಾತನಾಡಿದರು. ಡಿವೈಎಸ್‌ಪಿಗಳಾದ ಆರ್.ಎಸ್.ಉಜ್ಜನಕೊಪ್ಪ, ಎಸ್.ಯು.ಮಹೇಶಗೌಡ ಸೇರಿ 19 ಕಲಾವಿದರಿಗೆ ಗಾನ ಕೋಗಿಲೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತ ಗಾಯಕರಾದ ರಮೇಶ ಲಮಾಣಿ, ಎನ್.ಕೆ.ತೃಪ್ತಿ ಮತ್ತು ಇತರೆ ಕಲಾವಿದರಿಂದ ಗಾಯನ ನಡೆಯಿತು.
ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಎಸ್.ಶಿವರಾಮನಗೌಡ, ರಾಜವಂಶಸ್ಥೆ ಲಲಿತಾರಾಣಿ ರಾಯಲು, ಬಿಇಒ ಎಚ್.ಬಿ.ನಟೇಶ, ಪ್ರಮುಖರಾದ ಜೋಗದ ನಾರಾಯಣಪ್ಪ, ಜಗನ್ನಾಥ ಆಲ್ಲಂಪಲ್ಲಿ, ಶಿವಕುಮಾರಗೌಡ, ಡಾ.ಸಿ.ಬಿ.ಚಿನಿವಾಲರ್ ಇತರರಿದ್ದರು.