ಗಂಗಾವತಿ ವಿಜಯನಗರ ಕಾಲನಿಯ ಇಸಿಐ ಕಲ್ವರಿ ಚರ್ಚ್ ನಲ್ಲಿ ಕ್ರಿಸ್‌ಮಸ್ ಹಬ್ಬದ ನಿಮಿತ್ತ ಪುರುಷರ ಕ್ರಿಸ್‌ಮಸ್ (ಮೆನ್ಸ್ ಕ್ರಿಸ್‌ಮಸ್) ಹಬ್ಬ ಆಚರಿಸಲಾಯಿತು. ಚರ್ಚ್ ಮುಖ್ಯಸ್ಥರಾದ ರೆ.ಬಿಷಪ್ ರವಿ ಅಂದ್ಲಿ, ಯೋಹಾನ್‌ಬಾಬು, ಸೇಂಟ್‌ಪಾಲ್ಸ್ ಸಂಸ್ಥೆ ಕಾರ್ಯದರ್ಶಿ ಸರ್ವೇಶ ವಸದ್, ಕ್ರೈಸ್ತ್ ಸಮುದಾಯದ ಮುಖಂಡರಾದ ನವೀನ್ ಮಿರಜ್ಕರ್, ಶಾಮಣ್ಣ ಹೋನಕಪ್ಪ ಇತರರಿದ್ದರು.
ಗಂಗಾವತಿ: ನಗರದ ವಿಜಯನಗರ ಕಾಲನಿಯ ಇಸಿಐ ಕಲ್ವರಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ನಿಮಿತ್ತ ಕ್ರೈಸ್ತ್ ಸಮಾಜದಿಂದ ಭಾನುವಾರ ಪುರುಷರ ಕ್ರಿಸ್‌ಮಸ್ (ಮೆನ್ಸ್ ಕ್ರಿಸ್‌ಮಸ್) ಹಬ್ಬ ಆಚರಿಸಲಾಯಿತು.
ಸಮುದಾಯವರು ಒಂದೇ ರೀತಿಯ ಉಡುಪಿನೊಂದಿಗೆ ಭಾಗವಹಿಸಿದರು. ನಂತರ ಪ್ರಾರ್ಥನೆ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಬರಮಾಡಿಕೊಂಡರು. ಗಾಯನ, ಕಿರುನಾಟಕ ಪ್ರದರ್ಶನದ ಮೂಲಕ ಹಬ್ಬಕ್ಕೆ ಮೆರುಗು ನೀಡಿದರು. ಚರ್ಚ್ ಮುಖ್ಯಸ್ಥರಾದ ರೆ.ಬಿಷಪ್ ರವಿ ಅಂದ್ಲಿ ಮತ್ತು ಯೋಹಾನ್‌ಬಾಬು ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಮೆನ್ಸ್‌ಕ್ರಿಸ್‌ಮಸ್ ಹಬ್ಬದ ಕುರಿತು ಸೇಂಟ್ ಪಾಲ್ಸ್ ಸಂಸ್ಥೆ ಕಾರ್ಯದರ್ಶಿ ಸರ್ವೇಶ ವಸದ್ ಮಾತನಾಡಿದರು. ಕ್ರೈಸ್ತ್ ಸಮುದಾಯದ ಮುಖಂಡರಾದ ನವೀನ್ ಮಿರಜ್ಕರ್, ಶಾಮಣ್ಣ ಹೋನಕಪ್ಪ, ಅನಿಲ್ ಎಡ್ವರ್ಡ್, ರಾಜೇಶ್ ವಸ್ತ್ರದ್, ರಾಜು ಸುಧಾಕರ್, ನಿತಿನ್ ಇತರರಿದ್ದರು.