ರೈತರು-ವರ್ತಕರ ಬಾಂಧವ್ಯ ಉತ್ತಮವಾಗಿರಲಿ

ಗಂಗಾವತಿ ಎಪಿಎಂಸಿ ಪ್ರಾಂಗಣದಲ್ಲಿ ಗಂಗಾವತಿ ಅಗ್ರಿ ಎಂಪ್ಲಾಯಿಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ನೌಕರರ ಸಮಾವೇಶ, ವರ್ತಕರು ಮತ್ತು ಉದ್ಯೋಗಿಗಳ ಮಿಲನ ಕಾರ್ಯಕ್ರಮವನ್ನು ಸಹಾಯಕ ಇಲಾಖೆ ಕೃಷಿ ನಿರ್ದೇಶಕಿ ಸಿ.ಆರ್. ಅಭಿಲಾಷಾ ಉದ್ಘಾಟಿಸಿದರು. ಅಸೋಸಿಯೇಷನ್ ಗೌರವ ಅಧ್ಯಕ್ಷ ನಾಗರಾಜ ಚಕೋಟಿ ಕೇಸರಹಟ್ಟಿ, ತಾಲೂಕು ಅಧ್ಯಕ್ಷ ಪ್ರಶಾಂತ ತಳಕಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ
  • ಇಲಾಖೆ
  • ಸಹಾಯಕ

ಗಂಗಾವತಿ: ರೈತರಿಗೆ ಕೃಷಿ ಯೋಜನೆಗಳನ್ನು ಸಕಾಲಕ್ಕೆ ತಲುಪಿಸುವಲ್ಲಿ ನೌಕರರ ಪಾತ್ರ ಪ್ರಮುಖವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಆರ್.ಅಭಿಲಾಷಾ ಹೇಳಿದರು.

ಎಪಿಎಂಸಿ ಪ್ರಾಂಗಣದಲ್ಲಿ ಗಂಗಾವತಿ ಅಗ್ರಿ ಎಂಪ್ಲಾಯಿಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ನೌಕರರ ಸಮಾವೇಶ, ವರ್ತಕರು ಮತ್ತು ಉದ್ಯೋಗಿಗಳ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಗುಣಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ತಲುಪಿಸಲು ನೌಕರರ ವರ್ಗ ಶ್ರಮಿಸುತ್ತಿದ್ದು, ಕೃಷಿ ಚಟುವಟಿಕೆಗಳ ಭಾಗವಾಗಿದ್ದಾರೆ. ಕೃಷಿ ಕ್ಷೇತ್ರದ ಬೆನ್ನೆಲುಬಾಗಿರುವ ರೈತರು ಹಾಗೂ ವರ್ತಕರ ನಡುವೆ ಉತ್ತಮ ಬಾಂಧವ್ಯವಿರಬೇಕು ಎಂದರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆವಹಿಸಿದ್ದ ಅಸೋಸಿಯೇಷನ್ ಗೌರವ ಅಧ್ಯಕ್ಷ ನಾಗರಾಜ ಚಕೋಟಿ ಕೇಸರಹಟ್ಟಿ, ತಾಲೂಕು ಉಪಾಧ್ಯಕ್ಷ ಪ್ರಶಾಂತ ತಳಕಲ್ ಮಾತನಾಡಿದರು.
ಪದಾಧಿಕಾರಿಗಳಾದ ಅಜ್ಮೀರ್‌ಅಲಿ, ಡಾ.ರಾಘವೇಂದ್ರ ಎಲಿಗಾರ್, ಸುರೇಶ ಸಂಕನೂರು, ಮೋಹನ, ಕೆ.ಟಿ.ಚವ್ಹಾಣ್, ನರಸಪ್ಪ ಧನಂಜಯ, ಶ್ರೀಕಾಂತ ಮಾಕಿನೇನಿ, ಗುರುಪಾದಪ್ಪ, ಸಂಗಪ್ಪ ಗೌಡ, ಪ್ರಕಾಶ ರಾಥೋಡ್, ದೇವರಾಜ ಪಾಟೀಲ್, ವೀರಭದ್ರಗೌಡ, ಲಿಂಗರಾಜ, ಲಕ್ಷ್ಮಣ ಆದಾಪುರ, ಶ್ರೀನಿವಾಸ ಮರಿವಾಡ, ಸಿ.ಪ್ರಭಾಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net