ಪ್ರತಿ ವರ್ಷವೂ ಮೇಳ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಕೊಪ್ಪಳದಲ್ಲೂ ಯಶಸ್ವಿಯಾಗಿದೆ. ಈ ವರ್ಷ ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಮುಂಬಯಿನ ನ್ಯಾ.ಬಿ.ಜಿ.ಕೋಳ್ಸೆ ಪಾಟೀಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನೂಲಿನ ಪಾಣಿ, ಬೆಂಗಳೂರಿನ ವಿ. ಬಾಲಸುಬ್ರಮಣಿಯನ್, ಕಲಬುರಗಿಯ ಕೆ.ನೀಲಾ ಇತರರು ಭಾಗಿಯಾಗುವರು. ವಿವಿಧ ವಿಷಯಗಳ ಕುರಿತು ಗೋಷ್ಠಿ, ಕವಿಗೋಷ್ಠಿ, ಅನುಭವ ಕಥನ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ, ಸಂವಾದ, ವಿಚಾರ ಮಂಡನೆ ಇರಲಿದೆ. ನ್ಯಾಯಾಧೀಶ ಎಚ್.ನಾಗಮೋಹನದಾಸ್ ಸಮಾರೋಪ ನುಡಿ ಆಡುವರು. ನಾಡಿನಾದ್ಯಂತ ವಿವಿಧ ಗಣ್ಯರು ಭಾಗಿಯಾಗುವರು. ಕೊಪ್ಪಳದಿಂದ ನೂರಾರು ಜನರು ತೆರಳಲಿದ್ದೇವೆ. ಸಾಹಿತ್ಯಾಸಕ್ತರು ಆಗಮಿಸುವಂತೆ ಮನವಿ ಮಾಡಿದರು.