ಬದುಕು ಪರೋಪಕಾರದಿಂದ ಕೂಡಿರಲಿ: ಮುಂಡರಗಿ ಶ್ರೀ

ಕೊಪ್ಪಳ ತಾಲೂಕಿನ  ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಮುಂಡರಗಿ ಶ್ರೀಅನ್ನದಾನೀಶ್ವರ ಜಗದ್ಗುರುಗಳಿಗೆ ಬೆಟಗೇರಿ ಸದ್ಬಕ್ತರು ಗುರವಂದನೆ ಸಲ್ಲಿಸಿದರು. ಶ್ರೀ ಮಹಾದೇವ ಸ್ವಾಮೀಜಿ, ಪ್ರಮುಖರಾದ ಬಸವರಾಜ, ರಮೇಶ, ವಿರೇಶ, ಗುರುಬಸಯ್ಯ, ಸೋಮಪ್ಪ, ಪ್ರಭು ಇದ್ದರು.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಮುಂಡರಗಿ ಶ್ರೀಅನ್ನದಾನೀಶ್ವರ ಜಗದ್ಗುರುಗಳಿಗೆ ಬೆಟಗೇರಿ ಸದ್ಬಕ್ತರು ಗುರವಂದನೆ ಸಲ್ಲಿಸಿದರು. ಶ್ರೀ ಮಹಾದೇವ ಸ್ವಾಮೀಜಿ, ಪ್ರಮುಖರಾದ ಬಸವರಾಜ, ರಮೇಶ, ವಿರೇಶ, ಗುರುಬಸಯ್ಯ, ಸೋಮಪ್ಪ, ಪ್ರಭು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಟಗೇರಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ಕೊಪ್ಪಳ:ನಾವು ನಮ್ಮ ಬದುಕನ್ನು ಸ್ವಾರ್ಥದಿಂದ ಕಟ್ಟಿಹಾಕದೆ, ನಮ್ಮ ಕುಟುಂಬ, ಸಮಾಜ ಮತ್ತು ಇತರರ ಹಿತಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾ ಮಠದ ವಾರ್ಷಿಕೋತ್ಸವ ಮತ್ತು ಶ್ರೀ ಜ ಅ ವಿದ್ಯಾ ಸಮಿತಿಯ ಶತಮಾನೋತ್ಸವ ಸಮಾರಂಭದ ಸಾನಿದ್ಯ ವಹಿಸಿ ಮಾತಾನಾಡಿದರು.
ಪರೋಪಕಾರಂ ಇದಂ ಶರೀರಂ ಬದುಕಿನ ಸಾರ್ಥಕತೆ ಅಡಗಿರುವುದೇ ಇತರರ ಸೇವೆಯಲ್ಲಿ, ಕನಿಫ್ಠಿ ನಮಗಾಗಿ ಮತ್ತು ನಮ್ಮವರಿಗಾಗಿ ಜೊತೆಯಲ್ಲಿ ಇತರರಿಗಾಗಿ ಎಂಬುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ, ಮನುಫ್ಯಿ ಇತರರ ಒಳ್ಳೆಯದಕ್ಕಾಗಿ ಎಫಿ್ಟು ದುಡಿಯುತ್ತಾನೋ ಅಫಿ್ಟು ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು -ಮಹಾತ್ಮ ಗಾಂಧಿಜೀ ಹೇಳಿದ್ದಾರೆ, ಗೌತಮ ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ಬಾಬಾ ಸಾಹೇಬ್​ ಅಂಬೇಡ್ಕರ್​ ಮುಂತಾದ ಅನೇಕ ಮಹಾತ್ಮರು ತಮ್ಮ ಮನೆಯವರಿಗಾಗಿ ಹೆಚ್ಚಾಗಿ ಏನನ್ನೂ ಮಾಡಲಿಲ್ಲ. ಆದರೆ ನಾವುಗಳು ಮತ್ತು ಇಡೀ ದೇಶ ಈಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ ಮತ್ತು ಅವರ ಹುಟ್ಟು ಹಬ್ಬವನ್ನು ಅತ್ಯಂತ ಅಭಿಮಾನದಿಂದ ಆಚರಿಸಲಾಗುತ್ತದೆ ಆದ್ದರಿಂದ ಈ ಬದುಕು ಸಮಾಜಮುಖಿಯಾಗಿರಬೇಕು. ಕುಕನೂರಿನ ಶ್ರೀಗಳ ಕಾರ್ಯಶೀಲತೆ ಶ್ಲಾಘನೀಯ ಅವರಲ್ಲಿರುವ ಗುರುಭಕ್ತಿ ದೊಡ್ಡದು ಎಂದರು.
ಪೂಜ್ಯ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಗುರುವಿನ ಮಹಿಮೆ ಅಪಾರ ಏಕೆಂದರೆ ಅವರು ಜ್ಞಾನವನ್ನು ಹಂಚುವ, ಅಜ್ಞಾನವನ್ನು ನಿವಾರಿಸುವ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದಾರೆ. ಗುರುವು ಶಿಫ್ಯಿನ ಭವಿಫ್ಯಿವನ್ನು ರೂಪಿಸುವ ಸೃಷ್ಟಿಕರ್ತ, ತತ್ವಗಳನ್ನು ನೀಡುವ ಮಾರ್ಗದರ್ಶಕ ಮತ್ತು ತಪ್ಪುಗಳಿಂದ ಸರಿಪಡಿಸುವ ಶ್ರೇಫ್ಠಿ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಗುರುವಿನ ಮಹಿಮೆಯನ್ನು "ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಯಾರು ಕಾಯುವರು?" ಎಂಬ ಮಾತಿನಿಂದ ತಿಳಿಯಬಹುದು ಇಂತಹ ಶ್ರೇಫ್ಠಿ ಗುರುಗಳಾದ ಮಂಡರಗಿ ಶ್ರೀ ಜಗದ್ಗುರುಗಳನ್ನ ಪಡೆದ ನಾವೇ ದನ್ಯರು ಎಂದರು.
ಬೆಟಗೇರಿ ಗ್ರಾಮದ ಸಮಸ್ತ ಸದ್ಬಕ್ತರು ಮುಂಡರಗಿಯ ವಿದ್ಯಾಸಮಿಯ ಶತಮಾನೋತ್ಸವಕ್ಕೆ ಐವತ್ತೊಂದು ಸಾವಿರ ರೂಪಾಯಿ ದೇಣಿಗೆ ನೀಡಿ ಪೂಜ್ಯರಿಗೆ ಗುರುವಂದನೆ ಸಲ್ಲಿಸಿದರು.
ಪ್ರಮುಖರಾದ ಬಸವರಾಜ ಬಳ್ಳೊಳ್ಳಿ, ರಮೇಶ ಹಟ್ಟಿ, ವಿರೇಶ ಸಜ್ಜನ, ಗುರುಬಸಯ್ಯ ಬೃಹನ್ಮಠ, ಸೋಮಪ್ಪ ಮತ್ತೂರು, ಪ್ರಭು ಶಿವಸಿಂಪರ, ರಾಜೇಂದ್ರಪ್ಪ ಕಡಹಳ್ಳಿ, ಮುತ್ತಯ್ಯ ಹಿರೇಮಠ, ಸೋಮಣ್ಣ ಅರಕೇರಿ, ಬಸವರಾಜ ನಾಗರೆಡ್ಡಿ, ಯಮನೂರಪ್ಪ, ವಿಜಯ, ನಾರಾಯಣಪ್ಪ, ಬಾಬುಸಾಬ ಮತ್ತು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net