ತಾಪಂ ಇಒ ಅಮರೇಶ್ ಯಾದವ್ ಮಾತನಾಡಿ, ಪರಿಸರ ಕಾಳಜಿ ಜತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬ ಜೀವಕೋಶಗಳ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿ ಗಾಳಿ, ನೀರು, ಮರ, ಕಾಡು, ಜಲಮೂಲಗಳು ಪ್ರತಿಯೊಂದು ಬಹಳ ಮುಖ್ಯ. ಈ ಪರಿಸರವು ಯುಗ ಯುಗಗಳವರೆಗೂ ಉಳಿಯಬೇಕಾಗಿದೆ. ಆದ್ದರಿಂದ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನೀರನ್ನು ವ್ಯರ್ಥ ಮಾಡದೆ ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆ ಮುಕ್ತವಾಗಿಸಲು ಆದ್ಯತೆ ನೀಡಬೇಕು ಎಂದರು.