ಕನಕಗಿರಿ: ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಹುಣ್ಣಿಮೆ ನಿಮಿತ್ತ ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಪೂಜಾ ಕೈಕರ್ಯಗಳು ನೆರವೇರಿದವು. ಪ್ರತಿ ಹುಣ್ಣಿಮೆಗೂ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.
ಆದರೆ, 3 ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ದೇವಾನು ದೇವತೆಗಳ ದರ್ಶನ, ಆರಾಧನೆ ಮಾಡುವುದರಿಂದ ಪುಣ್ಯ ಸಿಗಲಿದೆ ಎನ್ನುವುದು ಪೂರ್ವಜರ ನಂಬಿಕೆ. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂದು ಅರ್ಚಕ ಮಧುರಕವಿ ತಿಳಿಸಿದರು. ದೇವಸ್ಥಾನ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ಶ್ರೀನಿವಾಸರೆಡ್ಡಿ ಓಣಿಮನಿ, ಗುಂಡಪ್ಪ ಚಿತ್ರಗಾರ, ನಾಗರಾಜ ಚಿತ್ರಗಾರ, ಮಂಜುನಾಥ ಗಡ್ಡಿ, ಸಿಂಗ್ರಾಚಾರ್, ವೆಂಕಟೇಶ ಸೌದ್ರಿ, ಮಂಜುನಾಥ ಬೊಕ್ಕಸದ ಇತರರಿದ್ದರು.