ಕೊಟ್ಟೂರು ಬಸವೇಶ್ವರ ದೇವಾಲಯ: ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ತ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶಿವಯೋಗ ಪ್ರಾತ್ಯಕ್ಷಿಕೆಯನ್ನು ವೈಜ್ಞಾನಿಕವಾಗಿ ವಿವರಿಸಲಾಯಿತು. ಹೊಸಪೇಟೆಯ ಪುಣ್ಯಕೋಟಿ ೌಂಡೇಷನ್ ಮುಖ್ಯಸ್ಥ ಅಜಯ್‌ಕುಮಾರ ತಾಂಡೂರು ಮಾತನಾಡಿದರು. ರಾಷ್ಟ್ರೀಯ ಬಸವದಳದ ಪ್ರತಿನಿಧಿಗಳಾದ ಪಂಪಣ್ಣ ಕಿನ್ನಾಳ್, ವಿಜಯಲಕ್ಷ್ಮೀ ನಾರಿನಾಳ್, ಚನ್ನಬಸಮ್ಮ ಕಂಪ್ಲಿ ಅವರಿಂದ ವಚನ ಗಾಯನ ನಡೆಯಿತು. ಅರಳಹಳ್ಳಿ ಬೃಹನ್ಮಠದ ಪದ್ಮಾಕ್ಷರಯ್ಯಸ್ವಾಮೀಜಿ, ನಿರ್ದೇಶಕರಾದ ಟಿ.ಎಚ್.ಬಸವರಾಜ, ಕೆ.ಸಿದ್ದಲಿಂಗೇಶ್ವರ, ಎಚ್.ಬಸವರಾಜ, ಜಿ.ವಿನಾಯಕ, ಕೆ.ಬಸವರಾಜ, ದಿಲೀಪ್‌ಕುಮಾರ ವಂದಾಲ, ರುದ್ರಪ್ಪ ಗಾಳಿ, ಎ.ಕೆ.ಮಹೇಶಕುಮಾರ, ಎ್.ಷಣ್ಮುಖಪ್ಪ, ಶೇಖರಪ್ಪ ಅರಳಿ, ಡಿ.ಜಿ.ಮಠದ್, ಕೆ.ಕಾಳಪ್ಪ, ವೀರೇಶರಡ್ಡಿ ಇತರರಿದ್ದರು.