ಕೊಪ್ಪಳ ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ. ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಗಳಾಗಿವೆ. ನಗರ ಪ್ರದೇಶದಲ್ಲಿ 282, ಗ್ರಾಮೀಣ ಭಾಗದಲ್ಲಿ 1,033 ಒಟ್ಟು 1,315 ಮತಗಟ್ಟೆಗಳಿವೆ. ನಗರ ಭಾಗದಲ್ಲಿ 2,80,638, ಗ್ರಾಮೀಣ ಪ್ರದೇಶದಲ್ಲಿ 9,12,543 ಒಟ್ಟು 11,93,181 ಮತದಾರರಿದ್ದಾರೆ. ಕುಷ್ಟಗಿ ಕ್ಷೇತ್ರದಲ್ಲಿ 268 ಮತಗಟ್ಟೆ, 2,49,115 ಮತದಾರರು, ಕನಕಗಿರಿಯಲ್ಲಿ 266 ಬೂತ್, 2,33,158 ವೋರ್ಟಸ್, ಗಂಗಾವತಿ 235 ಮತಗಟ್ಟೆ, 2,10,835 ಮತದಾರರು, ಯಲಬುರ್ಗಾ 256 ಪೋಲಿಂಗ್ ಬೂತ್, 2,32,631 ವೋರ್ಟಸ್ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರದಲ್ಲಿ 290 ಮತಗಟ್ಟೆ, 2,67,442 ವೋರ್ಟಸ್ ಇದ್ದಾರೆ.