100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದು, 30ಕ್ಕೂ ಅಧಿಕ ಸ್ಟಾಲ್‌ಗಳನ್ನು ನೀಡಲಾಗಿದೆ. 10ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ಅಂಗಡಿ ಸಹ ಇದೆ. ಕೇಸರ್, ದಶಹರಿ, ಆಪೂಸ್, ಬೇನಿಷಾ, ಮಲ್ಲಿಕಾ, ಸಿಂಧೂರಿ, ಇವಾಮ್ ಪಸಂದ್, ತೋತಾಪುರಿ, ರಸಪುರಿ, ಸ್ವರ್ಣರೇಖಾ ಸೇರಿ 200ಕ್ಕೂ ಅಧಿಕ ದೇಶಿ ಹಾಗೂ ವಿದೇಶಿ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನ ಮತ್ತು ವಾರಾಟಕ್ಕೆ ಇಡಲಾಗಿದೆ. ವಾವಿನ ಉಪ್ಪಿನಕಾಯಿ, ಸೀಕರಣೆ, ಜ್ಯೂಸ್ ಸೇರಿ ಹಲವು ಮೌಲ್ಯವರ್ಧಿತ ಉತ್ಪನ್ನಗಳು ಸಾರ್ವಜನಿರನ್ನು ಆಕರ್ಷಿಸುತ್ತಿವೆ.