ಕೊಪ್ಪಳದಲ್ಲಿ ಹಿರಿಯರ ಕೇಂದ್ರಗಳ ಪ್ರೇರಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ತಾಪಂ ಇಒ ಉದ್ಘಾಟನೆ ಮಾಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವೆಂಕಟೇಶ್ ದೇಶಪಾಂಡೆ, ಹಿರಿಯ ಸಂಯೋಜಕ ಮರೆಯಪ್ಪ, ಸಂಯೋಜಕ ಸಿದ್ದಲಿಂಗರೆಡ್ಡಿ, ಎಸ್. ಮಂಜಪ್ಪ ಇದ್ದರು.
ಕೊಪ್ಪಳ : ಗ್ರಾಂಪಂ ಮಟ್ಟದ ಗ್ರಂಥಾಲಯ ಅರಿವು ಕೇಂದ್ರಗಳಲ್ಲಿ ಸ್ಥಾಪಿಸಿರುವ ಹಿರಿಯರ ಕೇಂದ್ರಗಳನ್ನು ಉತ್ತಮವಾಗಿ ನೋಡಿಕೊಳ್ಳುಂತೆ ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ತಾಲೂಕಿನ 75 ಗ್ರಾಮಗಳ ಹಿರಿಯರ ಕೇಂದ್ರಗಳ ಪ್ರೇರಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಿನ್ನಾಳ ಗ್ರಾಮ ಪಂಚಾಯತ್ ಮಾದರಿಯನ್ನು ಅನುಸರಿಸಲು ಪ್ರೇರಕರಿಗೆ ಸಲಹೆ ನೀಡಿದರು. ಅಗತ್ಯ ಸಹಾಯಕ್ಕಾಗಿ ತಾಪಂ ಸಹಾಯವನ್ನು ಪಡೆಯಬಹುದು. ಹಿರಿಯರು ಕೇಂದ್ರದಲ್ಲಿ ಮೂರು ಗಂಟೆಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಳ್ಳುವ ವಿಧಾನ, ಸಮಯ ಪಾಲನೆ ಹಾಗೂ ಹಿರಿಯರನ್ನು ಕೇಂದ್ರಕ್ಕೆ ಕರೆತರಿಸುವ ವಿಧಾನಗಳ ಕುರಿತು ತಿಳಿಸಿದ ಅವರು ಪ್ರೇರಕರಿಗೆ ಒಪ್ಪಂದ ಪತ್ರ ಹಾಗೂ ಸ್ಟೇಷನರಿ ಸಾಮಗ್ರಿಗಳನ್ನು ವಿತರಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವೆಂಕಟೇಶ್ ದೇಶಪಾಂಡೆ, ಹಿರಿಯ ಸಂಯೋಜಕ ಮರೆಯಪ್ಪ, ಸಂಯೋಜಕ ಸಿದ್ದಲಿಂಗರೆಡ್ಡಿ, ಎಸ್. ಮಂಜಪ್ಪ ಇತರರಿದ್ದರು.