ಮಲಿಯಮ್ಮದೇವಿ ಪಲ್ಲಕ್ಕಿ ಮೆರವಣಿಗೆ

ರಘುನಾಥನಹಳ್ಳಿಯಲ್ಲಿ ಶ್ರೀ ಮಲಿಯಮ್ಮದೇವಿಯ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪ್ರಮಖರಾದ ಬಸವರಡ್ದೆಪ್ಪ, ಮಲ್ಲಪ್ಪ, ನಾಗರಾಜ, ಶರಣಪ್ಪ ಇತರರಿದ್ದರು.
ರಘುನಾಥನಹಳ್ಳಿಯಲ್ಲಿ ಶ್ರೀ ಮಲಿಯಮ್ಮದೇವಿಯ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪ್ರಮಖರಾದ ಬಸವರಡ್ದೆಪ್ಪ, ಮಲ್ಲಪ್ಪ, ನಾಗರಾಜ, ಶರಣಪ್ಪ ಇತರರಿದ್ದರು.
Published on
ಅಳವಂಡಿ: ಸಮೀಪದ ರಘುನಾಥನಹಳ್ಳಿಯ ಆರಾಧ್ಯ ದೇವತೆ ಶ್ರೀ ಮಲಿಯಮ್ಮದೇವಿಯ ಜಾತ್ರೆ ಅಂಗವಾಗಿ ಬುಧವಾರ ದೇವಿಯ ಮೆರವಣಿಗೆ ನಡೆಯಿತು.
ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪ ಹಾಗೂ ತಳಿರು, ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಶ್ರೀ ಮಲಿಯಮ್ಮದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ನಂತರ ಶ್ರೀದೇವಿಯ ಅಡ್ಡಪಲ್ಲಕ್ಕಿ ಕಳಸ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗಂಗಾ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನವನ್ನು ತಲುಪಿತು. ನಂತರ ಭಕ್ತರು ದೇವಿಗೆ ಉಡಿ ತುಂಬಿ ಭಕ್ತಿ ಹರಕೆ ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.
ಪ್ರಮುಖರಾದ ಬಸವರಡ್ದೆಪ್ಪ ಹಳ್ಳಿಕೇರಿ, ಮಲ್ಲಪ್ಪ, ನಾಗರಾಜ, ಮೈಲಾರಪ್ಪ, ಯಲ್ಲಪ್ಪ, ವಾಸಪ್ಪ, ಶರಣಪ್ಪ, ಮಾರುತಿ, ಹನುಮಂತ, ಪರಸಪ್ಪ, ಮಾಂತೇಶ, ಮುತ್ತಣ್ಣ, ಮಾರುತಿ, ನಾಗರಾಜ, ರಮೇಶ, ಬಸವರಾಜ, ವೆಂಕಟೇಶ, ಅಂಬರೀಶ, ವಿರೂಪಾಕ್ಷಪ್ಪ, ರಾಮಪ್ಪ, ಬಸವರಾಜ, ತಿಪ್ಪಣ್ಣ, ಶ್ರೀಕಾಂತ, ರಾಜು, ಬಸವರಾಜ, ರವಿ, ಮಂಜುನಾಥ, ಬನ್ನಪ್ಪ, ಯಮುನಪ್ಪ, ಪೂಜಪ್ಪ, ಭೀಮಪ್ಪ, ಪ್ರವೀಣ, ಸಂತೋಷ, ಶಂಕ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net