ಕೊಪ್ಪಳ : ಮತದಾರರ ವಿಶೇಷ ತಿವ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಬಿಎಲ್ಓಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಈ ವೇಳೆ ಪ್ರತಿಯೊಬ್ಬ ಅರ್ಹ ಮತದಾರರಿಗೆ ಎನುಮರೇಷನ್ ಫಾರಂ ಸಿಗುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರ ಬೂತ್ ಮಟ್ಟದ ಏಜೆಂಟರುಗಳಿಗೆ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್-&2026ರ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತದಲ್ಲಿ ಇದುವರೆಗೂ ಒಟ್ಟು 7 ಬಾರಿ ವಿಶೇಷ ಸಮಗ್ರ ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕದಲ್ಲಿ 2002 ರಲ್ಲಿ ಎಸ್ಐಆರ್ ಆಗಿತ್ತು. 2002ರ ಮಾತದಾರರ ಪಟ್ಟಿಯಲ್ಲಿರುವವರು ಅರ್ಹ ಮತದಾರರೆಂದು ಪರಿಗಣಿಸಲಾಗುತ್ತಿದೆ. ಪ್ರಸ್ತುತ 2025ರ ಮಾತದಾರರ ಪಟ್ಟಿಯನ್ನು 2002ರ ಪಟ್ಟಿಯೊಂದಿಗೆ ಹೋಲಿಕೆ ಮಾಡಿ ಅವರನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಿಎಲ್ಎ ಮತ್ತು ಬಿಎಲ್ಓಗಳ ಪಾತ್ರ ಮುಖ್ಯವಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಮತದಾರರ ಪಟ್ಟಿ ದೊಷರಹಿತವಾಗಿರಬೇಕು. ಹಾಗಾಗಿ ಎರಡು ಕಡೆ ಹೆಸರಿರುವ ಮತದಾರರನ್ನು ಪತ್ತೆ ಹಚ್ಚಿ ಪರಿಷ್ಕರಿಸಲಾಗುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆ ಈ ಬಾರಿ ಸಂಪೂರ್ಣವಾಗಿ ಡಿಜಿಟಲೈಜ್ ಆಗಿರುವುದರಿಂದ ಒಬ್ಬ ಮತದಾರನಿಗೆ ಎರಡು ಕಡೆ ಹೆಸರು ಉಳಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿಲ್ಲ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ 2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ಎನುಮರೇಷನ್ ಫಾರಂ ಕೊಡಲಾಗುತ್ತದೆ. ಮತದಾರರು ಭರ್ತಿ ಮಾಡಿ, ಬಿಎಲ್ಓಗಳಿಗೆ ನೀಡಿದ್ದಲ್ಲಿ ಅದನ್ನು ಅವರು ಆ್ಯಪ್ ಮೂಲಕ ಮುಂದಿನ ಕ್ರಮ ಕೈಗೊಳ್ಳುವರು. ಬಿಎಲ್ಓಗಳು ನಿಮ್ಮೊಂದಿಗೆ ಸಭೆ ಮಾಡಿ. ಮತದಾರರಿಂದ ಎನುಮರೇಷನ್ ಫಾರಂ ಸಂಗ್ರಹಿಸಿ, ಅದನ್ನು ಬಿಎಲ್ಓಗಳಿಗೆ ನೀಡಲು ಎಲ್ಲಾ ಬೂತ್ ಮಟ್ಟದ ಏಜೆಂಟರುಗಳಿಗೆ ಅವಕಾಶ ನೀಡಲಾಗಿದೆ. ಈ ವೇಳೆಯ ಮ್ಯಾಪಿಂಗ್ ಆಗದೇ ಇರುವ ಮತದಾರರ ಮ್ಯಾಪಿಂಗ್ ಮಾಡಿಸಲು ಸಹ ನೀವುಗಳು ಸಹರಿಸಬೇಕು ಎಂದು ಹೇಳಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಎಸ್ಐಆರ್ ಪ್ರಯುಕ್ತ ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಶೇ 92 ಕ್ಕಿಂತು ಹೆಚ್ಚಿನ ಪ್ರಮಾಣದಲ್ಲಿ ಮ್ಯಾಪಿಂಗ್ ಮಾಡಿದ್ದು, ರಾಜ್ಯದಲ್ಲಿ ನಮ್ಮ ಜಿಲ್ಲೆ ಮುಂಚೂಣಿಯಲ್ಲಿದೆ. ಎನುಮರೇಷನ್ ಫಾರಂ ಭರ್ತಿ ಮಾಡಿ ಸಲ್ಲಿಸುವುದು ತುಂಬಾ ಅವಶ್ಯಕವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಬಿಟ್ಟು ಹೋಗದಂತೆ ಎಲ್ಲಾ ಬಿಎಲ್ಎಗಳು ನೋಡಿಕೊಳ್ಳಬೇಕೆಂದರು. ಜಿಲ್ಲಾ ಮಟ್ಟದ ಮಾಸ್ಟರ್ ಟೆನರ್ ವಿದ್ಯಾಧರ ಎಸ್ಐಆರ್ ಕುರಿತು ವಿವರವಾಗಿ ಮಾಹಿತಿ ನೀಡಿದರು.
ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ ಚಂದ್ರಶೇಖರ, ಬಿಜೆಪಿ ಗ್ರಾಮೀನ ಟಕದ ಅಧ್ಯಕ್ಷ ವಿರೇಶ ಸಜ್ಜನ, ಎಡಿಸಿ ಸಿದ್ರಾಮೇಶ್ವರ, ಕಾಂಗ್ರೆಸ್ ಪಕ್ಷದ ಕೃಷ್ಣರಡ್ಡಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಬಿಎಲ್ಎ-&1 ಮತ್ತು 2 ಇತರರಿದ್ದರು.
"
ಎಸ್ಐಆರ್ ಹಿನ್ನಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳಿಂದ ಬಿಎಲ್ಎ&-1 ಮತ್ತು 2ನ್ನು ನೇಮಿಸಿಕೊಂಡಿದ್ದಾರೆ. ಬಿಎಲ್ಓಗಳ ವಿವರಗಳುಳ್ಳ ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟರುಗಳಿಗೆ ನೀಡಬೇಕು. ಇದರಿಂದ ಬಾಕಿ ಇರುವ ಮತದಾರರ ಮ್ಯಾಪಿಂಗ್ ಮಾಡಿಸಲು ಬಿ.ಎಲ್.ಎ.ಗಳಿಗೆ ಅನುಕೂಲವಾಗುತ್ತದೆ.