ಯಲಬುರ್ಗಾ ತಾಲೂಕಿನ ಗುನ್ನಾಳದಲ್ಲಿ ಹಮ್ಮಿಕೊಂಡಿದ್ದ ಡೆಂೆ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ ಪುರಾಣಿಕ ಮಾತನಾಡಿದರು. ವಾರ್ಡನ್ ಶಂಕರ ಸಕ್ರಿ, ಆರೋಗ್ಯ ಸಿಬ್ಬಂದಿ ಮಲ್ಲಯ್ಯ, ಕಾವೇರಿ ಅಕ್ಕಸಾಲಿಗರ, ಕೆ.ಎಂ. ಪಾಲಜ್ಜಯ್ಯ ಇದ್ದರು.
ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ ಪುರಾಣಿಕ ಸಲಹೆ
ಜಾಗೃತಿ ಕಾರ್ಯಕ್ರಮ
ಯಲಬುರ್ಗಾ: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ ಪುರಾಣಿಕ ಹೇಳಿದರು.
ತಾಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಡೆಂೆ ನಿಯಂತ್ರಣ ದಿನ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಳೆಗಾಲ ಆರಂಭವಾಗಿದ್ದು, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ.
ಮನೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟುಕೊಳ್ಳಬೇಕು. ಮನೆ ಬಳಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಜ್ವರ, ತಲೆನೋವು, ವಾಂತಿ, ಮೈಕೈ ನೋವು ಕಾಣಿಸಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ತಾಲೂಕು ಮಲೇರಿಯಾ ಮೇಲ್ವಿಚಾರಕ ಮಂಜುನಾಥ ಹಿರೇಮನಿ ಮಾತನಾಡಿ, ವಿದ್ಯಾರ್ಥಿಗಳು ಮನೆ ಹಾಗೂ ಗ್ರಾಮಗಳಲ್ಲಿ ಡೆಂೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು. ವಾರಕ್ಕೊಮ್ಮೆ ಡ್ರೈ ಡೇ ಆಚರಿಸುವ ಮೂಲಕ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ್, ದೇವರಾಜ ಅರಸು ವಸತಿ ನಿಲಯದ ವಾರ್ಡನ್ ಶಂಕರ ಸಕ್ರಿ, ಸಿಬ್ಬಂದಿ ದುರಗಪ್ಪ ಹರಿಜನ, ಲೋಕೇಶ ವಾಲ್ಮೀಕಿ, ಆರೋಗ್ಯ ಸಿಬ್ಬಂದಿ ಮಲ್ಲಯ್ಯ, ಕಾವೇರಿ ಅಕ್ಕಸಾಲಿಗರ, ಕೆ.ಎಂ.ಪಾಲಜ್ಜಯ್ಯ ಇತರರಿದ್ದರು.