ನೀರಿನ ಮೂಲಗಳ ಸುತ್ತ ನೈರ್ಮಲ್ಯವಿರಲಿ

ಯಲಬುರ್ಗಾ ತಾಪಂ ಕಚೇರಿಯಲ್ಲಿ ಎಫ್‌ಟಿ ಕಿಟ್ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಕುರಿತು ನಡೆದ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರದಲ್ಲಿ ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಹೂಗಾರ, ಆದಪ್ಪ ಇದ್ದರು.
ಯಲಬುರ್ಗಾ ತಾಪಂ ಕಚೇರಿಯಲ್ಲಿ ಎಫ್‌ಟಿ ಕಿಟ್ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಕುರಿತು ನಡೆದ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರದಲ್ಲಿ ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಹೂಗಾರ, ಆದಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಎಡಿ ಹನಮಂತಗೌಡ ಪಾಟೀಲ್ ಸೂಚನೆ
  • ಯಲಬುರ್ಗಾ ತಾಪಂ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರ
ಯಲಬುರ್ಗಾ: ಕುಡಿವ ನೀರಿನ ಮೂಲಗಳ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ತಾಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ತಾಲೂಕಿನ 22 ಗ್ರಾಪಂಗಳ ನೀರಗಂಟಿ ಹಾಗೂ ಕಾರ್ಯದರ್ಶಿಗಳಿಗೆ ಆರ್‌ಡಬ್ಲುಎಸ್ ಇಲಾಖೆಯಿಂದ ಎಫ್‌ಟಿ ಕಿಟ್ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಚರಂಡಿ ನೀರಿನ ಮೂಲವು ಅಂತರ್ಜಲ ಸೇರಿ ಕಲುಷಿತಗೊಂಡಿರುವ ನೀರು ಜನ ಸಮುದಾಯಕ್ಕೆ ಸಿಗುವಂತಾಗಿದೆ. ಅಂತಹ ನೀರಿನ ಮೂಲ ಪತ್ತೆ ಹಚ್ಚಿ, ನೈರ್ಮಲ್ಯ ಕಾಪಾಡಬೇಕು. ನೀರಿನ ಪೈಪ್‌ಲೈನ್ ಸೋರಿಕೆ ಸರಿಪಡಿಸಿ ತಿಂಗಳಿಗೊಮ್ಮೆ ನೀರಿನ ಗುಣಮಟ್ಟ ಪರಿಶೀಲಿಸಬೇಕು ಎಂದು ಸೂಚಿಸಿದರು.
ತಾಲೂಕಿನ ಪ್ರತಿ ಗ್ರಾಪಂ ನೀರುಗಂಟಿಗಳು ನೈರ್ಮಲ್ಯತೆ ಕಾಪಾಡುವಲ್ಲಿ ಮುತುವರ್ಜಿವಹಿಸಬೇಕು ಮತ್ತು ಕಬ್ಬಿಣದ ಪ್ರಾತ್ಯಕ್ಷಿಕೆಯಾಗಿ ಎಫ್‌ಟಿ ಕಿಟ್‌ಗಳ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದರು. ತರಬೇತುದಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಹೂಗಾರ, ಆದಪ್ಪ ತಿಳಿಸಿದರು. ಗ್ರಾಪಂ ಮಾರ್ಗದರ್ಶಿಗಳು ಮತ್ತು ನೀರುಗಂಟಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net