ಸಂಘರ್ಷಮಯ ಜಗತ್ತಿಗೆ ಮಹಾವೀರರ ತತ್ವಗಳೇ ದಾರಿದೀಪ

ಭಗವಾನ್​ ಮಹಾವೀರರ ಶೋಭಾಯಾತ್ರೆಯು ನಗರದ ಅಶೋಕ ವೃತ್ತದಿಂದ ಆರಂಭವಾಗಿ ಎಂ.ಪಿ ಪ್ಯಾಲೇಸ್​ ವರೆಗೆ ಅದ್ಧೂರಿಯಾಗಿ ಜರುಗಿತು.
ಭಗವಾನ್​ ಮಹಾವೀರರ ಶೋಭಾಯಾತ್ರೆಯು ನಗರದ ಅಶೋಕ ವೃತ್ತದಿಂದ ಆರಂಭವಾಗಿ ಎಂ.ಪಿ ಪ್ಯಾಲೇಸ್​ ವರೆಗೆ ಅದ್ಧೂರಿಯಾಗಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ಣಕುಮಾರ ಅಭಿಪ್ರಾಯ
  • ಅದ್ಧೂರಿ ಮಹಾವೀರ ಜಯಂತಿ ಆಚರಣೆ
ಕೊಪ್ಪಳ : ಇಂದಿನ ಸಂಘರ್ಷಮಯ ವಾತಾವರಣದ ಜಗತ್ತಿಗೆ ಭಗವಾನ್​ ಮಹಾವೀರರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಅಭಿಪ್ರಾಯಪಟ್ಟರು.
ಜಿಲ್ಲಾಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಭಗವಾನ್​ ಮಹಾವೀರ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾಜಿಕ ಸವಾಲುಗಳ ನಿವಾರಣೆಗೆ ದಾರ್ಶನಿಕರ ಚಿಂತನೆಗಳು ಅಗತ್ಯ. ಮಹಾವೀರರ ಸತ್ಯ ಮತ್ತು ಅಹಿಂಸೆಯ ಸಂದೇಶಗಳು ಸಾಮರಸ್ಯದ ಸಮಾಜ ಕಟ್ಟಲು ಪ್ರೇರಣೆಯಾಗಿವೆ. 24ನೇ ತೀರ್ಥಂಕರರಾದ ಅವರ ಶಾಂತಿಯ ಸಂದೇಶಗಳು ಇಂದಿನ ವಿಶ್ವಕ್ಕೆ ದಾರಿದೀಪವಾಗಿವೆ ಎಂದರು.

ಅದ್ದೂರಿ ಶೋಭಾಯಾತ್ರೆ

ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಭಗವಾನ್​ ಮಹಾವೀರರ ಶೋಭಾಯಾತ್ರೆಗೆ ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರು ಪಾಲಕಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಸಂಸದ ಸಂಗಣ್ಣ ಕರಡಿ ಅವರು ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕರ್ಣಕುಮಾರ್​ ಅವರು ಹಸಿರು ಧ್ವಜ ತೋರಿದರು. ಮೆರವಣಿಗೆಯು ಜವಾಹರ ರಸ್ತೆ ಮಾರ್ಗವಾಗಿ ಶಾಂತಿ ಸಂದೇಶಗಳ ಷಣೆಯೊಂದಿಗೆ ಸಾಗಿತು.

ಸಾಧಕರಿಗೆ ಸನ್ಮಾನ

ಮೆರವಣಿಗೆಯ ನಂತರ ನಗರದ ಎಂ.ಪಿ ಪ್ಯಾಲೇಸ್​ ಹಾಲ್​ನಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. 10 ಮತ್ತು 12ನೇ ತರಗತಿಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಭರತ್​ ಮಹಾವೀರ ಭಂಡಾರಿ, ಜೀತ್​ ದಿಲೀಪ್​ ಧಾನೇಶಾ, ಹಾರ್ದಿಕ್​ ಭರತ್​ ಸಂಕಲೇಚಾ, ದೀಶಾ ಪ್ರಮೋದ ಜೀರಾವಲಾ, ಪ್ರಿಂಜಲ್​ ವಿನೋದ ಜೀರಾವಲಾ ಹಾಗೂ ಮೋಕ್ಷ ಕಮಲೇಶ ಸಾಲೇಚಾ ಅವರನ್ನು ಸನ್ಮಾನಿಸಲಾಯಿತು.
ಜೈನ ಮರುಧರ ಸಂಘದ ಅಧ್ಯಕ್ಷ ಮಹೇಂದ್ರ ಚೋಪ್ರಾ, ಮಹಾವೀರ ಭಂಡಾರಿ, ಘೀಸುಲಾಲ ಮೆಹತಾ, ದೀಪಚಂದ ಶ್ರೀಮಾಲ,ರಾಜೇಂದ್ರ ಜೀರಾವಲಾ, ಜೋಗರಾಜ ಪಾಲರೇಚಾ, ವಿನೋದ ಜೀರಾವಲಾ, ಘೇಸುಲಾಲ ಸಾಲೇಚಾ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಸಂಗೀತಾ ಜೀರಾವಲಾ, ಉಮಾದೇವಿ ಚೋಪ್ರಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net