ಅಪರಿಗ್ರಹ ಸಂದೇಶಗಳ ಸ್ಮರಣೆ

ಹುಲಿಗಿಯಲ್ಲಿ ಜೈನ ಧರ್ಮದ 24ನೇ ತೀಥರ್ಂಕರ ಭಗವಾನ್ ಮಹಾವೀರರ ಜಯಂತಿ ಸೋಮವಾರ ಆಚರಿಸಲಾಯಿತು. ಜೈನ ಸಮಾಜದ ಅಧ್ಯಕ್ಷ ಬುಜಬಲಿ ಪಾಟೀಲ್, ಉಪಾಧ್ಯಕ್ಷ ಅಜೀತ್ ಕುಮಾರ್ ತುಂಬಳ ಇತರರಿದ್ದರು.
ಹುಲಿಗಿಯಲ್ಲಿ ಜೈನ ಧರ್ಮದ 24ನೇ ತೀಥರ್ಂಕರ ಭಗವಾನ್ ಮಹಾವೀರರ ಜಯಂತಿ ಸೋಮವಾರ ಆಚರಿಸಲಾಯಿತು. ಜೈನ ಸಮಾಜದ ಅಧ್ಯಕ್ಷ ಬುಜಬಲಿ ಪಾಟೀಲ್, ಉಪಾಧ್ಯಕ್ಷ ಅಜೀತ್ ಕುಮಾರ್ ತುಂಬಳ ಇತರರಿದ್ದರು.
Published on
ಮುನಿರಾಬಾದ್: ಸಮೀಪದ ಹುಲಿಗಿಯಲ್ಲಿ ಜೈನ ಧರ್ಮದ 24ನೇ ತೀಥರ್ಂಕರ ಭಗವಾನ್ ಮಹಾವೀರರ ಜಯಂತಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಾಂತಿ, ಅಹಿಂಸೆ ಮತ್ತು ಪಂಚ ಸಿದ್ಧಾಂತಗಳಾದ ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹದ ಸಂದೇಶಗಳನ್ನು ಸ್ಮರಿಸುವ ಮೂಲಕ ಜಯಂತಿಗೆ ವಿಶೇಷ ಮೆರುಗು ನೀಡಲಾಯಿತು.
ಸೋಮವಾರ ಬೆಳಗ್ಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಂತರ ಭಗವಾನ್ ಮಹಾವೀರರ ಭಾವಚಿತ್ರ ಮೆರವಣಿಗೆಯು ಗ್ರಾಮದ ಪ್ರಮುಖ ರಥ ಬೀದಿಗಳಲ್ಲಿ ಸಾಗಿತು. ದಾರಿಯುದ್ದಕ್ಕೂ ಭಕ್ತರು ಜಯಘೋಷ ಮೊಳಗಿಸಿದರು.
ಮಧ್ಯಾಹ್ನದ ವೇಳೆಗೆ ಮಂದಿರದಲ್ಲಿ ಮಹಾವೀರ ತೀಥರ್ಂಕರರಿಗೆ ಪಂಚ ಕಳಸ ಸ್ಥಾಪನೆ ಹಾಗೂ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬಳಿಕ ಜನ್ಮ ಕಲ್ಯಾಣದ ಸಂಕೇತವಾಗಿ ಶಾಸ್ತ್ರೋಕ್ತವಾಗಿ ತೊಟ್ಟಿಲು ಸೇವೆ ಜರುಗಿತು. ಕಾರ್ಯಕ್ರಮ ಬಳಿಕ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಮಾಜದ ಸದಸ್ಯರಾದ ಸುಹಾಸ್ ಇಜಾರಿ, ವಿನಯ ತುಂಬಳ, ಧರ್ಮರಾಜ್ ಪಾಟೀಲ್, ಶಂಕರಗೌಡ, ಸಂತೋಷ್ ಪೊಲೀಸ್ ಪಾಟೀಲ್, ಪುಷ್ಪದಂತ ಪಾಟೀಲ್, ಸನ್ಮತಿ ಇಜಾರಿ, ಶಂಕರ್ ಪಲ್ಲೇದ್, ಬೊಮ್ಮನಗೌಡ ಪಾಟೀಲ್, ರಾಮನಗೌಡ, ವಿಜಯಕುಮಾರ್ ತವನಪ್ಪನವರ್, ಸಣ್ಣಪಮ್ಮಣ್ಣ ಜೈನ್, ಚಂದ್ರನಾಥ್ ಜೈನ್, ಹರೀಶ್ ಮಂಗಳೂರು ಜೈನ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net