ಮಧ್ವನವಮಿ ಉತ್ಸವ ಸಂಪನ್ನ

ಗಂಗಾವತಿ ತಾಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಮಂತ್ರಾಲಯ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಆನೆಗೊಂದಿ ರಾಯರ ಮಠದಿಂದ ಹಮ್ಮಿಕೊಂಡಿದ್ದ ಶ್ರೀ ಮಧ್ವನವಮಿ ಉತ್ಸವ ನಿಮಿತ್ತ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಅರ್ಚಕರಾದ ನರಸಿಂಹಾಚಾರ್, ಶ್ರೀನಿವಾಸಾಚಾರ್ ಪ್ರವೀಣಾಚಾರ್, ವಿಜಯ್ ದೇಸಾಯಿ, ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹೂವಿನ ಅಲಂಕಾರ
  • ಅಷ್ಟೋತ್ತರ ಪಾರಾಯಣ

ಮಧ್ವನವಮಿ ಉತ್ಸವ ಸಂಪನ್ನ

ಗಂಗಾವತಿ: ಶ್ರೀ ಜವಾಹರ ನಗರದ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಮಂಗಳವಾರ ಮಧ್ವನವಮಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಪರಿವಾರದ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಹೋಮ, ಪೂರ್ಣಾಹುತಿ ಮತ್ತು ಸಾಮೂಹಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ದೇವಾಲಯದಲ್ಲಿ ವಾಗೀಶಾಚಾರ್ ಗೋರೆಬಾಳ್ ಅವರಿಂದ ಉಪನ್ಯಾಸ ಮತ್ತು ಅಂತಾರಾಷ್ಟ್ರೀಯ ಗಾಯಕ ಬಿ.ಹುಸೇಬ್‌ಸಾಬ್ ದಾಸ್ ಅವರಿಂದ ದಾಸವಾಣಿ ಆಯೋಜಿಸಲಾಗಿತ್ತು.
ದೇವಾಲಯ ಸಮಿತಿಯ ನರಸಿಂಹಮೂರ್ತಿ ಆಲಂಪಲ್ಲಿ, ಮುರಳೀಧರ ಕುಲ್ಕರ್ಣಿ, ನಾರಾಯಣರಾವ್ ವೈದ್ಯ, ಕೊಪ್ರೇಶ ಜೋಶಿ, ಮೋಹನ ಲೆಕ್ಕಿಹಾಳ್, ಪ್ರಸನ್ನ ರಾಂಭಟ್ ಜೋಶಿ, ಮೋಹನ್ ಇತರರಿದ್ದರು.
ಆನೆಗೊಂದಿ: ತಾಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಮಂತ್ರಾಲಯ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಆನೆಗೊಂದಿ ರಾಯರ ಮಠದಿಂದ ಶ್ರೀ ಮಧ್ವನವಮಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ವಿಶೇಷ ಲ ಪಂಚಾಮತಾಭಿಷೇಕ, ವಸ, ಹೂವಿನ ಅಲಂಕಾರ ಹಸ್ತೋದಕ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ಜರುಗಿದವು.
ಪ್ರಾಜೆಕ್ಟ್ ಪ್ರತಿನಿಧಿ ಸುಳಾದಿ ಹನುಮೇಶಾಚಾರ್ ನೇತೃತ್ವದ ವಿವಿಧ ಜಿಲ್ಲೆಯ ಭಜನಾ ಮಂಡಳಿ ಸದಸ್ಯರಿಂದ ನಿರಂತರ ಭಜನೆ ನಡೆಯಿತು. ಅರ್ಚಕರಾದ ನರಸಿಂಹಾಚಾರ್, ಶ್ರೀನಿವಾಸಾಚಾರ್ ಪ್ರವೀಣಾಚಾರ್, ವಿಜಯ್ ದೇಸಾಯಿ, ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net