ಮಾಚಿದೇವರ ವಚನಗಳೇ ಸಮಾಜಕ್ಕೆ ಶಕ್ತಿ

ಕೊಪ್ಪಳದ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ ಮಡಿವಾಳ ಮಾಚಿದೇವ ಜಯಂತಿಯನ್ನು ಚಿತ್ರದುರ್ಗ ಮಠದ ಶ್ರೀ ಜಗದ್ಗುರು ಡಾ. ಬಸವ ಮಾಚಿದೇವ ಸ್ವಾಮಿಗಳು ಉದ್ಘಾಟಿಸಿದರು. ಜೀವನ ಕೌಶಲ್ಯ ತರಬೇತುದಾರ ಜೆ.ಸಿ. ರಾಜಶೇಖರ ಬಳ್ಳಾರಿ, ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತ, ಉಪಾಧ್ಯಕ್ಷ ಪಕ್ಕೀರಪ್ಪ ಮಡಿವಾಳರ, ಕನ್ನಡ ಮತ್ತು ಸಂಸತಿ ಇಲಾಖೆ ಹಾಯಕ ನಿರ್ದೇಶಕ ಕರ್ಣಕುಮಾರ ಇತರರಿದ್ದರು.
ಕೊಪ್ಪಳದ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ ಮಡಿವಾಳ ಮಾಚಿದೇವ ಜಯಂತಿಯನ್ನು ಚಿತ್ರದುರ್ಗ ಮಠದ ಶ್ರೀ ಜಗದ್ಗುರು ಡಾ. ಬಸವ ಮಾಚಿದೇವ ಸ್ವಾಮಿಗಳು ಉದ್ಘಾಟಿಸಿದರು. ಜೀವನ ಕೌಶಲ್ಯ ತರಬೇತುದಾರ ಜೆ.ಸಿ. ರಾಜಶೇಖರ ಬಳ್ಳಾರಿ, ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತ, ಉಪಾಧ್ಯಕ್ಷ ಪಕ್ಕೀರಪ್ಪ ಮಡಿವಾಳರ, ಕನ್ನಡ ಮತ್ತು ಸಂಸತಿ ಇಲಾಖೆ ಹಾಯಕ ನಿರ್ದೇಶಕ ಕರ್ಣಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ. ಬಸವ ಮಾಚಿದೇವ ಸ್ವಾಮಿ
  • ಮಡಿವಾಳ ಮಾಚಿದೇವ ಜಯಂತಿ
ಕೊಪ್ಪಳ : ಶಿಕ್ಷಣ ಮತ್ತು ಒಗ್ಗಟ್ಟಿನಿಂದ ಮಾತ್ರ ಸಮುದಾಯದ ಏಳಿಗೆ ಸಾಧ್ಯ. 12ನೇ ಶತಮಾನದ ಕ್ರಾಂತಿಕಾರಿ ಶರಣ ಮಡಿವಾಳ ಮಾಚಿದೇವರ ವಚನಗಳು ಇಡೀ ಜಗತ್ತಿಗೆ ಜ್ಞಾನದ ದಾರಿಯಾಗಿವೆ. ನಮ್ಮ ಸಮುದಾಯದ ಏಳಿಗೆಯಾಗಬೇಕಾದರೆ ಆಧ್ಯಾತ್ಮಿಕ ಶಕ್ತಿಯೊಂದಿಗೆ ಶೈಕ್ಷಣಿಕ ಮತ್ತು ನೈತಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಚಿತ್ರದುರ್ಗದ ಜಗದ್ಗುರು ಡಾ. ಬಸವ ಮಾಚಿದೇವ ಸ್ವಾಮಿಗಳು ಕರೆ ನೀಡಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಡಿವಾಳ ಮಾಚಿದೇವರು ಸಮಾಜದ ಸೂತಕವನ್ನು ಕಳೆದ ಮಹಾನ್​ ಚೇತನ. ಅವರು ನೀಡಿದ 3 ಕೋಟಿ 300 ವಚನಗಳು ನಮಗೆ ಸ್ಫೂರ್ತಿ. ಇಂದು ಮೀಸಲಾತಿ ಎಂಬುದು ಗಗನಕುಸುಮವಾಗಿದೆ. ನಮ್ಮ ಪೂರ್ವಜರು ಅನುಭವಿಸಿದ ಕಷ್ಟಗಳು ನಮ್ಮ ಮುಂದಿನ ಪೀಳಿಗೆಗೆ ಬರಬಾರದು ಎಂದರೆ ಶಿಕ್ಷಣದ ಜೊತೆಗೆ ಹೋರಾಟವೂ ಮುಖ್ಯ. ಹೀಗಾಗಿ, ಮಾರ್ಚ್​ 16ರಂದು ವಿಧಾನಸೌಧದ ಮುಂದೆ ನಡೆಯಲಿರುವ ಪ್ರತಿಭಟನೆಯಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀಗಳು ಮಾರ್ಗದರ್ಶನ ನೀಡಿದರು.
ಜೀವನ ಕೌಶಲ್ಯ ತರಬೇತುದಾರ ಜೆ.ಸಿ. ರಾಜಶೇಖರ ಬಳ್ಳಾರಿ ಮಾತನಾಡಿ, ನಮ್ಮ ಸಮುದಾಯ ಸಂಖಯೆಯಲ್ಲಿ ಕಡಿಮೆಯಿರಬಹುದು, ಆದರೆ ಒಗ್ಗಟ್ಟಿನಲ್ಲಿ ಬಲಿಫ್ಠಿವಾಗಬೇಕು. ಯಾವುದೇ ಸ್ವಾರ್ಥವಿಲ್ಲದ. ನಮ್ಮವರು ಎನ್ನುವ ಭಾವನೆಯುಳ್ಳ ನವಯುವಕರ ತಂಡದಿಂದ ಮಾತ್ರ ಸಮುದಾಯದ ಬದಲಾವಣೆ ಸಾಧ್ಯ. ಬಸವಣ್ಣನವರ ಬೆನ್ನಿಗೆ ಆಧಾರವಾಗಿ ನಿಂತವರು ಮಾಚಿದೇವರು. ಅಂತಹ ಪರಂಪರೆಯ ನಮಗೆ ಶಿಕ್ಷಣವೇ ಅತಿ ದೊಡ್ಡ ಆಯುಧ ಎಂದರು.
ಉತ್ತರ ಕರ್ನಾಟಕ ಮಡಿವಾಳ ಮಾಚಿದೇವ ಸಂಘದ ಉಪಾಧ್ಯಕ್ಷ ಪಕ್ಕೀರಪ್ಪ ಮಡಿವಾಳರ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಮಡಿವಾಳರ, ವಕ್ತಾರ ಬಸವರಾಜ ಬೆಳಗಲಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಮಡಿವಾಳರ, ಗೌರವಾಧ್ಯಕ್ಷ ದುರುಗೇಶಜಿ. ಮಡಿವಾಳರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಇತರರಿದ್ದರು.
"

ಈಗಾಗಲೇ ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಡಿವಾಳ ಸಮುದಾಯ ಎಸ್ಸಿ ಪಟ್ಟಿಯಲ್ಲಿದೆ. ರಾಜ್ಯದಲ್ಲಿಯೂ ಅನ್ನಪೂರ್ಣಮ್ಮ ಆಯೋಗದ ವರದಿ ಸಲ್ಲಿಕೆಯಾಗಿದ್ದರೂ ಸರ್ಕಾರ ನಮಗೆ ನ್ಯಾಯ ಒದಗಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಹಕ್ಕೊತ್ತಾಯ ಮಂಡಿಸಲು ಮಾರ್ಚ್​ 16ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಕ್ಕೆ ಬೆಂಬಲ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net