2025ರ ಜನವರಿ 1ರಿಂದ 2026ರ ಜೂನ್ 30ರವರೆಗೆ ಜಿಲ್ಲೆಯಲ್ಲಿ ಡಕಾಯಿತಿ, ದರೋಡೆ, ಸರಗಳ್ಳತನ, ಮನೆ ಕಳ್ಳತನ, ಜಾನುವಾರು ಕಳ್ಳತನ ಸೇರಿದಂತೆ 252 ಸ್ವತ್ತಿನ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 104 ಪ್ರಕರಣಗಳನ್ನು ಭೇದಿಸಿ 1,82,45,960 ರೂ. ಮೌಲ್ಯದ ಮುದ್ದೆಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಸಿ.ಇ.ಐ.ಆರ್. ಪೋರ್ಟಲ್ ಮೂಲಕ ಪತ್ತೆಯಾದ 1905 ಮೊಬೈಲ್ಗಳು, 988.960 ಗ್ರಾಂ ಚಿನ್ನ, 10.938 ಕೆಜಿ ಬೆಳ್ಳಿ, 43.33 ಲಕ್ಷ ರೂ. ನಗದು, 6 ನಾಲ್ಕು ಚಕ್ರದ ವಾಹನಗಳು, 3 ತ್ರಿಚಕ್ರ ವಾಹನಗಳು ಹಾಗೂ 34 ದ್ವಿಚಕ್ರ ವಾಹನಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.