ಕೊಪ್ಪಳದಲ್ಲಿ ಭಗವಾನ್​ ಮಹಾವೀರರ ಸ್ಮರಣೆ ಸರಳ ಆಚರಣೆ

ಕೊಪ್ಪಳದ ಜೈನ ಬಸೀದಿಯಲ್ಲಿ ಸೋಮವಾರ ಭಗವಾನ್​ ಶ್ರೀ ಮಹಾವೀರ ಜಯಂತಿ ಸರಳವಾಗಿ ಆಚರಿಸಲಾಯಿತು.
ಕೊಪ್ಪಳದ ಜೈನ ಬಸೀದಿಯಲ್ಲಿ ಸೋಮವಾರ ಭಗವಾನ್​ ಶ್ರೀ ಮಹಾವೀರ ಜಯಂತಿ ಸರಳವಾಗಿ ಆಚರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮೆರವಣಿಗೆಯಲ್ಲಿ ತಂಪು ಪಾನೀಯ ವಿತರಣೆ
ಕೊಪ್ಪಳ : ನಗರದಲ್ಲಿ ಎಸ್​ಎಸ್​ಎಸ್​ ಜೈನ ಸಂದಿಂದ ಸೋಮವಾರ ಭಗವಾನ್​ ಶ್ರೀ ಮಹಾವೀರ ಜಯಂತಿ ಆಚರಿಸಲಾಯಿತು.
ಬೆಳಗ್ಗೆ 8.15 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಭಾವಚಿತ್ರ ಮೆರವಣಿಗೆ ನಡೆಯಿತು. ಸಂದ ಪದಾಧಿಕಾರಿಗಳು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದರು. ಮೆರವಣಿಗೆಯಲ್ಲಿ ಭಾಗಿಯಾದವರು ಹಾಗೂ ಸಾರ್ವಜನಿಕರಿಗೆ ತಂಪು ಪಾನೀಯ, ಮಜ್ಜಿಗೆ ವಿತರಿಸಲಾಯಿತು.
ಬಳಿಕ ಪುರಾತನ ಜೈನ ಬಸೀದಿಯಲ್ಲಿ ವಿಶೇಷ ಪೂಜೆ, ಆರತಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಜೈನ ಸಾಧ್ವಿಜಿ ಶ್ರೀಸಂಯಮ ಪ್ರಿಯಾಜಿ ಸಾನಿಧ್ಯವಹಿಸಿ ಧಾರ್ಮಿಕ ಪ್ರವಚನ ನೀಡಿದರು. ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮುದಾಯ ಪ್ರಮುಖರಾದ ಅಭಯ ಕುಮಾರ ಮೆಹತಾ, ಅಶೋಕಚಂದ ತಾಲೇಡಾ, ಗೌತಮಚಂದ ಜಾಂಗಡಾ, ಮಂತ್ರಿ ವಿಜಯ ಕುಮಾರ ಮೆಹತಾ, ಮೇಘರಾಜ ರಾತಡಿಯಾ, ಮಹಾವೀರ ಮೆಹತಾ, ಪವನ ಕುಮಾರ ಪೋಕರ್ಣಾ, ರಿಕಬ ಕುಮಾರ ಸುರಾಣಾ, ಪ್ರವಿಣ ಕುಮಾರ ಮೆಹತಾ, ರೋಣಕ ಕುಮಾರ, ವಿನಯ ಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net