ಹುಲಗಿ, ಕುಷ್ಟಗಿ, ಕಾರಟಗಿಯಲ್ಲಿ ವಾಹನ ಶೋ ರೂಂ ಆರಂಭಕ್ಕೆ ಪರವಾನಗಿ ಕೋರಿ ನಯಿಮ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಸಂಬಂಧಿಸಿದ ದಾಖಲಾತಿ ಒದಗಿಸಿದ್ದರು. 40 ದಿನದೊಳಗೆ ಅರ್ಜಿ ವಿಲೇವಾರಿ ಮಾಡಬೇಕು. ಮೂರು ತಿಂಗಳಾದರೂ ಪರವಾನಗಿ ನೀಡಿಲ್ಲ. ಹಲವು ದಾಖಲೆ ತರುವಂತೆ ಅಲೆದಾಡಿಸಿದ್ದಾರೆ. ಕೊನೆಗೆ 21 ಸಾವಿರ ರೂ. ಲಂಚ ನೀಡುವಂತೆ ಎಸ್ಡಿಎ ರಂಜಿತ್ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಯಿಮ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕಚೇರಿಯಲ್ಲಿ ವಿನಯ್ ಎಂಬಾತನ ಮೂಲಕ ಲಂಚದ ಹಣ ಪಡೆವ ವೇಳೆ ಲೋಕಾಯುಕ್ತ ಡಿವೈಎಸ್ಪಿ ಲೋಕೇಶ, ಪಿಐ ಸುನಿಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಹಣದ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.