ಹಳ್ಳಿಯಲ್ಲಿ ಸಮ್ಮೇಳನ ಆಯೋಜನೆಗೆ ನಿರ್ಧಾರ

ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನ ಪರಿಷತ್ ಕಾರ್ಯಕಾರಿ ಸಮಿತಿ ಪೂರ್ವಭಾವಿ ಸಭೆಯಲ್ಲಿ ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರ‌್ಹಾಳ್ ಗುರುವಾರ ಮಾತನಾಡಿದರು. ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಪದಾಧಿಕಾರಿಗಳಾದ ರಮೇಶ ಕುಲಕರ್ಣಿ ಮರಳಿ, ಚಂದ್ರಶೇಖರ ಅಕ್ಕಿ ಇತರರಿದ್ದರು.
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನ ಪರಿಷತ್ ಕಾರ್ಯಕಾರಿ ಸಮಿತಿ ಪೂರ್ವಭಾವಿ ಸಭೆಯಲ್ಲಿ ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರ‌್ಹಾಳ್ ಗುರುವಾರ ಮಾತನಾಡಿದರು. ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಪದಾಧಿಕಾರಿಗಳಾದ ರಮೇಶ ಕುಲಕರ್ಣಿ ಮರಳಿ, ಚಂದ್ರಶೇಖರ ಅಕ್ಕಿ ಇತರರಿದ್ದರು.
Published on
ಗಂಗಾವತಿ: ತಾಲೂಕು ಮಟ್ಟದ 9ನೇ ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರ‌್ಹಾಳ್ ಹೇಳಿದರು.
ನಗರದ ಕಸಾಪ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮ್ಮೇಳನ ಪರಿಷತ್ ಕಾರ್ಯಕಾರಿ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನ ಸಮ್ಮೇಳನ ಗ್ರಾಮೀಣ ಪ್ರದೇಶಕ್ಕೆ ಆತಿಥ್ಯಕ್ಕೆ ಅವಕಾಶ ಕಲ್ಪಿಸಬೇಕಿದ್ದು, ಗ್ರಾಮಾಂತರ ಭಾಗಕ್ಕೂ ಆದ್ಯತೆ ನೀಡಿದಂತಾಗುವುದು. ಒಂದು ದಿನಕ್ಕೆ ಸಮ್ಮೇಳನ ಸೀಮಿತಗೊಳಿಸುವುದು ಒಳಿತು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಮೂಲಕ ಸಾಹಿತ್ಯ ಮತ್ತು ಕಸಾಪ ಕಾರ್ಯಕ್ರಮಗಳನ್ನು ವಿಸ್ತರಿಸೋಣ ಎಂದರು.
ಆರ‌್ಹಾಳ, ಕೇಸರಹಟ್ಟಿ, ಹೇರೂರು, ಬಸಾಪಟ್ಟಣ, ಹಿರೇಬೆಣಕಲ್, ವೆಂಕಟಗಿರಿ ಸೇರಿ ವಿವಿಧ ಗ್ರಾಮಗಳ ಹೆಸರು ಪ್ರಸ್ತಾಪವಾಗಿದ್ದು, ಮೊದಲ ಬಂದವರಿಗೆ ಅವಕಾಶ ನೀಡುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಯಿತು. ಮೇ ತಿಂಗಳಲ್ಲಿ ಆನೆಗೊಂದಿ ಉತ್ಸವ ದಿನಾಂಕ ನಿಗದಿಯಾಗಲಿದ್ದು, ಸಮ್ಮೇಳನಕ್ಕೆ ತೊಂದರೆಯಾಗದಂತೆ ಎಚ್ಚರಿಕೆವಹಿಸಬೇಕು. ಏಪ್ರಿಲ್ ತಿಂಗಳಲ್ಲಿ ಎಲ್ಲ ವಾರ್ಷಿಕ ಪರೀಕ್ಷೆ ಪೂರ್ಣಗೊಳ್ಳಲಿದ್ದು, ಎರಡು ಮತ್ತು ಮೂರನೇ ವಾರದಲ್ಲಿ ಆಯೋಜಿಸುವುದು ಸೂಕ್ತ. ಮಹತ್ವ ವಿಚಾರ ಗೋಷ್ಠಿ, ಸ್ಥಳೀಯ ಸಾಹಿತಿ, ಕಲಾವಿದರಿಗೆ ಅವಕಾಶ ಮತ್ತು ಕಸಾಪ ದತ್ತಿ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ಇತ್ತೀಚಿಗೆ ನಿಧನರಾದ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ವೆಂಕಟರಾವ್ ಕುಲ್ಕರ್ಣಿಗೆ ನುಡಿ ನಮನ ಸಲ್ಲಿಸಲಾಯಿತು.
ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಪದಾಧಿಕಾರಿಗಳಾದ ರಮೇಶ ಕುಲಕರ್ಣಿ ಮರಳಿ, ಚಂದ್ರಶೇಖರ ಅಕ್ಕಿ, ಶಿವಾನಂದ ತಿಮ್ಮಾಪುರ, ರಮೇಶ ಬಾಳಿಕಾಯಿ, ಶರಣಪ್ಪ ಮಟ್ಟಿ, ಶಿವಾನಂದ ಶಿಳ್ಳಿನ್, ಮಂಜುನಾಥ ಕುರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net