

ಪ್ರಮುಖ ಮುಖ್ಯಾಂಶಗಳು
ಕನಕಗಿರಿ: ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯಕನಕಗಿರಿ ತಾಲೂಕು ಘಟಕಕ್ಕೆ ನಿವೇಶನಮಂಜೂರು ಮಾಡಲು ಆಗ್ರಹಿಸಿ ಪಟ್ಟಣದವೀರಶೈವ ಲಿಂಗಾಯತ ಸಮಾಜದಿಂದ ಪಪಂಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿಗೆಮಂಗಳವಾರ ಮನವಿ ಸಲ್ಲಿಸಲಾಯಿತು.
ಜಿಪಂಮಾಜಿ ಸದಸ್ಯ ವೀರೇಶ ಸಮಗಂಡಿಮಾತನಾಡಿ,ಪಟ್ಟಣದಲ್ಲಿದೊಡ್ಡ ಸಂಖ್ಯೆಯಲ್ಲಿ ವೀರಶೈವಲಿಂಗಾಯತ ಸಮುದಾಯದವರಿದ್ದಾರೆ.ಆದರೆ,ಸಮಾಜದಯಾವುದೇ ಕಾರ್ಯಕ್ರಮ ನಡೆಸಲು,ಸೇರಲುಸಮುದಾಯ ಭವನ ಇಲ್ಲವಾಗಿದೆ.ಕನಕಗಿರಿಪಟ್ಟಣ ದಿನದಿಂದ ದಿನಕ್ಕೆಬೆಳೆಯುತ್ತಿದ್ದು,ಸಾಕಷ್ಟುಶಾಲೆ-ಕಾಲೇಜುಗಳುಪಟ್ಟಣದಲ್ಲಿ ಆರಂಭವಾಗುತ್ತಿವೆ.
ಈಹಿನ್ನೆಲೆಯಲ್ಲಿ ಸಮುದಾಯದವಿದ್ಯಾರ್ಥಿ ನಿಲಯ ಆರಂಭಿಸುವುದುಸೇರಿ ಸಮುದಾಯದ ಶ್ರೇಯೋಭಿವೃದ್ಧಿಗೆಕಟ್ಟಡದ ಅವಶ್ಯವಿದ್ದು,ಅದಕ್ಕೆಸಿಎ ನಿವೇಶನ ಅಗತ್ಯವಿದೆ.ಈಗಾಗಲೇವೀರಶೈವ ಮಹಾಸಭಾ ಸಂಘಟನೆ ಸಮುದಾಯಕ್ಕೆಸಾಕಷ್ಟು ಕೆಲಸ ಮಾಡುತ್ತಿದೆ.ಅದಕ್ಕಾಗಿಪಟ್ಟಣದಲ್ಲಿ 10ಸಾವಿರಚದರ ಅಡಿಯ ಸಿಎ ನಿವೇಶನ ಮಂಜೂರುಮಾಡಬೇಕು ಎಂದು ಆಗ್ರಹಿಸಿದರು.
ಪಪಂಸದಸ್ಯರಾದ ಸಂಗಪ್ಪ ಸಜ್ಜನ,ಸುರೇಶಗುಗ್ಗಳಶೆಟ್ಟರ,ಅನೀಲ್ಬಿಜ್ಜಳ,ಶರಣೇಗೌಡ,ರಾಜಾಸಾಬನಂದಾಪುರ,ಪ್ರಮುಖರಾದಮಹಾಂತೇಶ ಸಜ್ಜನ,ವಾಗೀಶಹಿರೇಮಠ,ರವಿಪಾಟೀಲ್,ಪ್ರಶಾಂತತೆಗ್ಗಿನಮನಿ,ನೀಲಕಂಠಗೌಡ,ಶರಣಪ್ಪಭತ್ತದ್,ಶಿವಪ್ರಕಾಶಸಜ್ಜನ ಇತರರಿದ್ದರು.