ಸಿಡಿಲಿಗೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳು

ಹಿಟ್ನಾಳ ಟೋಲ್ ಗೇಟ್‌ನಲ್ಲಿ ಭಾರಿ ಮಳೆ, ಗಾಳಿಗೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿರುವುದು.
ಹಿಟ್ನಾಳ ಟೋಲ್ ಗೇಟ್‌ನಲ್ಲಿ ಭಾರಿ ಮಳೆ, ಗಾಳಿಗೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಭಾರಿ ಮಳೆಗೆ ಲಕ್ಷಾಂತರ ರೂ. ನಷ್ಟ
  • ಸುಗಮ ಕಾರ್ಯನಿರ್ವಹಣೆ ಅನುಕೂಲ
ಮುನಿರಾಬಾದ್: ಸಮೀಪದ ಹಿಟ್ನಾಳ ಟೋಲ್ ಗೇಟ್‌ನಲ್ಲಿ ಮೇ 23ರಂದು ಸುರಿದ ಸಿಡಿಲು ಸಹಿತ ಭಾರಿ ಮಳೆಗೆ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ. ಯುಪಿಎಸ್, ಆರ್‌ಎಫ್‌ಐಡಿ, ಆಂಟೆನಾ, ಸ್ವಿಮ್ ಕಂಟ್ರೋಲರ್ ಸೇರಿದಂತೆ ಇತರ ಅತ್ಯಾಧುನಿಕ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಇದರಿಂದಾಗಿ ಟೋಲ್ ಕಂಪನಿಗೆ ಆರ್ಥಿಕ ನಷ್ಟವಾಗಿದೆ ಎಂದು ಟೋಲ್ ವ್ಯವಸ್ಥಾಪಕ ಅವಿನಾಶ್ ಶುಕ್ಲಾ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ತಾಂತ್ರಿಕ ತಂಡ, ಸಿಸ್ಟಮ್ ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ನೆಡಸಿ ಸುಗಮ ಕಾರ್ಯನಿರ್ವಹಣೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net