10ರಿಂದ ಶರಣರ ಜೀವನ ದರ್ಶನ ಪ್ರವಚನ

ಗಂಗಾವತಿಯಲ್ಲಿ ಬಸವ ಜಯಂತಿ ಆಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರವಚನದ ಮಾಹಿತಿ ಪತ್ರ ಬಿಡುಗಡೆ ಮಾಡಲಾಯಿತು. ಸಮಿತಿ ಸಂಚಾಲಕರಾದ ಕೆ.ಬಸವರಾಜ, ಡಾ.ಶಿವಕುಮಾರ ಮಾಲಿಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್.ಎಸ್.ಗಿರೇಗೌಡ ಇತರರಿದ್ದರು.
ಗಂಗಾವತಿಯಲ್ಲಿ ಬಸವ ಜಯಂತಿ ಆಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರವಚನದ ಮಾಹಿತಿ ಪತ್ರ ಬಿಡುಗಡೆ ಮಾಡಲಾಯಿತು. ಸಮಿತಿ ಸಂಚಾಲಕರಾದ ಕೆ.ಬಸವರಾಜ, ಡಾ.ಶಿವಕುಮಾರ ಮಾಲಿಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್.ಎಸ್.ಗಿರೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೀವನ ದರ್ಶನ

10ರಿಂದ ಶರಣರ ಜೀವನ ದರ್ಶನ ಪ್ರವಚನ

ಗಂಗಾವತಿ: ಬಸವ ಜಯಂತಿ ನಿಮಿತ್ತ ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯದ ವೇದಿಕೆಯಲ್ಲಿ ಏ.10ರಿಂದ 20ರವರೆಗೆ ಶರಣರ ಜೀವನ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಆಚರಣೆ ಸಮಿತಿ ಸಂಚಾಲಕ ಕೆ.ಬಸವರಾಜ್ ಹೇಳಿದರು.
ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯ ವೇದಿಕೆಯಲ್ಲಿ ಸಮಿತಿಯಿಂದ ಬಸವ ಜಯಂತಿ ಆಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರತಿ ದಿನ ಸಂಜೆ 6.45ರಿಂದ 7.45ರವರೆಗೆ 11ದಿನ ಪ್ರವಚನ ಆಯೋಜಿಸಿದ್ದು, ಹಾಸನ ಜಿಲ್ಲೆ ಮಲ್ಲೇದೇವರಪುರದ ಮುಕುಂದೂರು ವಿರಕ್ತಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಏ.10ರಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಲಿಸಲಿದ್ದಾರೆ ಎಂದರು.
ಜಗನ್ಮಾತೆ ಅಕ್ಕಮಹಾದೇವಿ ಮತ್ತು ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಆಚರಿಸಲಾಯಿತು. ಸಮಿತಿಗೆ ಎ್.ಷಣ್ಮುಖಪ್ಪ ಗೌರವಾಧ್ಯಕ್ಷ, ಕೆ.ಕಾಳಪ್ಪ ಅಧ್ಯಕ್ಷ, ಅರಳಿ ಶೇಖರಪ್ಪ ಕಾರ್ಯಾಧ್ಯಕ್ಷ, ಡಿ.ಜಿ.ಮಠದ್ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್.ಎಸ್.ಗಿರೇಗೌಡ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಶಾಮಮೂರ್ತಿ ಐಲಿ, ದಿಲೀಪ್ ವಂದಾಲ್, ರಾಚಪ್ಪ ಸಿದ್ದಾಪುರ, ಶ್ರೀಶೈಲ ಪಟ್ಟಣಶೆಟ್ಟಿ, ಸಮಿತಿ ಸಂಚಾಲಕರಾದ ಡಾ.ಶಿವಕುಮಾರ ಮಾಲಿ ಪಾಟೀಲ್, ವೀರೇಶರಡ್ಡಿ, ಎ.ಕೆ.ಮಹೇಶಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net