ಸಿದ್ದಾಪುರ: ಗ್ರಾಮ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಸಿಡಿಲು ಹಾಗೂ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಕೊಟ್ನೇಕಲ್, ಬರಗೂರು, ಜಮಾಪುರ, ಮುಸ್ಟೂರು, ಗುಂಡೂರು, ಲಕ್ಷ್ಮೀಕ್ಯಾಂಪ್, ನಂದಿಹಳ್ಳಿ, ಕಕ್ಕರಗೋಳ ಮತ್ತಿತರೆಡೆ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು.