ಕೊಪ್ಪಳದಲ್ಲಿ ನಷ್ಟದಲ್ಲಿರುವ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ರಾಜ್ಯ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ಜಿ. ಶ್ರೀಧರ್ ಕೆಸರಟ್ಟಿ ಉದ್ಘಾಟಿಸಿದರು. ಪ್ರಮೂಖರಾದ ಶಂಕರಗೌಡ ಹಿರೇಗೌಡ್ರು, ಕುಮಾರಪ್ಪ ಸಿಂಗನಾಳ, ಸುನಿಲ್ ಪತ್ತಾರ್, ಸೂರ್ಯಕಾಂತ್ ರಾಕಲೆ, ಓಂಕಾರ ಇದ್ದರು.
ಕೊಪ್ಪಳ: ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಯಲ್ಲಿ ಪೂರಕವಾಗಿರುವ ಸಹಕಾರ ಸಂಘಗಳಲ್ಲಿ ನಾವೆಲ್ಲಾ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಉತ್ತಮ ಲಾಭದೊಂದಿಗೆ ಸಹಕಾರ ಕ್ಷೇತ್ರವನ್ನು ಬಲಿಪಡಿಸೋಣ ಎಂದು ಬೆಂಗಳೂರಿನ ರಾಜ್ಯ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ಜಿ. ಶ್ರೀಧರ್ ಕೆಸರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗಂಗಾ-&ಯಮುನಾ ಸಹಕಾರಿ ಸಂಘದಿಂದ ಗುರುವಾರ ಆಯೋಜಿಸಿದ ಜಿಲ್ಲೆಯ ನಷ್ಟದಲ್ಲಿರುವ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ರಾಜ್ಯದಲ್ಲೇ ಕೊಪ್ಪಳ ಜಿಲ್ಲೆ ಹೆಚ್ಚಿನ ಸೌಹಾರ್ದ ಸಹಕಾರಿ ಸಂಘಗಳಿವೆ. ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು
ಸೌಹಾರ್ದ ಸಹಕಾರಿಗಳು ಮಾಹಿತಿಯ ಕೊರತೆಯಿಂದ ನಷ್ಟದಲ್ಲಿ ಅನುಭವಿಸುತ್ತಿವೆ. ಇಂತಹ ಸಹಕಾರಿಗಳನ್ನು ಗುರುತಿಸಿ ಹಲವಾರು ರೀತಿಯ ಯೋಜನೆ ತರಬೇತಿ ಹಮ್ಮಿಕೊಳ್ಳುವುದರ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಸಹಕಾರಿಗಳು ಇದರ ಸದುಪಯೋಗ ಪಡೆದುಕೊಂಡು ತರಬೇತಿಯಲ್ಲಿ ಹೇಳಿರುವ ಅಂಶಗಳನ್ನು ಅಳವಡಿಸಿಕೊಂಡು ಮುಂಬರುವ ವರ್ಷದಲ್ಲಿ ನಮ್ಮ ಸಹಕಾರಿಗಳು ಲಾಭದಲ್ಲಿ ಬರಲು ಪ್ರಯತ್ನಿಸಬೇಕು ಎಂದರು.
ಕೊಪ್ಪಳ ಜಿಲ್ಲಾ ಸೌಹಾರ್ದ ಒಕ್ಕೂಟದ ನಿರ್ದೇಶಕರುಗಳಾದ ಶಂಕರಗೌಡ ಹಿರೇಗೌಡ್ರು, ಕುಮಾರಪ್ಪ ಸಿಂಗನಾಳ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಸುನಿಲ್ ಪತ್ತಾರ್. ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ್ ರಾಕಲೆ ಜಿಲ್ಲೆಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ ಇತರರಿದ್ದರು.