ಗಂಗಾವತಿ ತಾಲೂಕಿನ ಹೊಸಳ್ಳಿಯ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಶಾರೋನ್ ಸಂಪೂರ್ಣ ಸುವಾರ್ತೆ ಸಂಘದಿಂದ ಹಮ್ಮಿಕೊಂಡ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು. ವೈದ್ಯರಾದ ಡಾ.ಶಿವಾನಂದ ನಿಂಗೊಪ್ಪ, ಮುತ್ತಣ್ಣ, ಆಯುರ್ವೇದ ಕಾಲೇಜು ವೈದ್ಯಾಧಿಕಾರಿಗಳಾದ ಡಾ.ಅನುಶ್ರೀ, ಡಾ.ರಾಜೇಶ್ವರಿ ಇತರರಿದ್ದರು.
ಗಂಗಾವತಿ: ತಾಲೂಕಿನ ಹೊಸಳ್ಳಿಯ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಶಾರೋನ್ ಸಂಪೂರ್ಣ ಸುವಾರ್ತೆ ಸಂಘದಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಪವಿಭಾಗ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ರಕ್ತದೊತ್ತಡ ಸಕ್ಕರೆ ಕಾಯಿಲೆ, ಎಚ್‌ಐವಿ, ರಕ್ತ, ಎಲುಬು ಕೀಲು, ಕ್ಷಯ ರೋಗಗಳನ್ನು ತಪಾಸಿಸಿ ಸಲಹೆ ನೀಡಲಾಯಿತು. 75ಕ್ಕೂ ಹೆಚ್ಚು ಲಾನುಭವಿಗಳು ಭಾಗವಹಿಸಿದ್ದರು.
ಕ್ರೈಸ್ತ ಧರ್ಮಗುರು ರೆ.ವಿ.ಆರ್. ಬಸವರಾಜ ಮಾತನಾಡಿ, ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕಿದ್ದು, ಉಚಿತ ಶಿಬಿರಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮಾತನಾಡಿದರು.
ವೈದ್ಯರಾದ ಡಾ.ಶಿವಾನಂದ ನಿಂಗೊಪ್ಪ, ಮುತ್ತಣ್ಣ, ಆಯುರ್ವೇದಿಕ್ ಕಾಲೇಜು ವೈದ್ಯಾಧಿಕಾರಿಗಳಾದ ಅನುಶ್ರೀ, ರಾಜೇಶ್ವರಿ, ದೇವಾಲಯ ಸಮಿತಿ ಅಧ್ಯಕ್ಷ ಸಿದ್ದಪ್ಪ ಕರೇಕುರಿ, ಪ್ರಮುಖರಾದ ಹನುಮೇಶಪ್ಪ, ಶರಣಪ್ಪ ಪಿ.ಪಾಟೀಲ್, ಸಿದ್ಧಾರ್ಥ ಇತರರಿದ್ದರು.