ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

ಗಂಗಾವತಿ ಕರ್ನಾಟಕ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡ ಸಂಘಟನಾತ್ಮಕ ಸಭೆಯನ್ನು  ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಶಿವಕುಮಾರ ಗೌಡ, ಜಿಲ್ಲಾಧ್ಯಕ್ಷ ಇಂಗಳಗಿ ಪಂಪಾಪತಿ, ಪದಾಧಿಕಾರಿಗಳಾದ ಸೋಮಶೇಖರ ಶ್ರೇಷ್ಠಿ ಹನುಮಂತಪ್ಪ ಢಣಾಪುರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹೂವಿನ
  • ಕುಂಡಲಕ್ಕೆ
  • ನೀರು
ಗಂಗಾವತಿ: ನಗರದ ಕರ್ನಾಟಕ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಕಚೇರಿಗೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಶನಿವಾರ ಭೇಟಿ ನೀಡಿ ಕಾರ್ಮಿಕರೊಂದಿಗೆ ಚರ್ಚಿಸಿದರು.
ಕಚೇರಿಯಲ್ಲಿ ಆಯೋಜಿಸಿದ್ದ ಸಂಘಟನಾತ್ಮಕ ಸಭೆಯನ್ನು ಹೂವಿನ ಕುಂಡಲಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಸಂಘಟನಾತ್ಮಕವಾಗಿ ಬಲಿಷ್ಠರಾಗುವಂತೆ ಸಲಹೆ ನೀಡಿದರು. ಕಾರ್ಮಿಕರ ಹಕ್ಕುಗಳು, ಸಂಘಟನೆ ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂಘದ ಅಧ್ಯಕ್ಷ ಶಿವಕುಮಾರಗೌಡ ಮಾತನಾಡಿ, ಏ.7ರಂದು ಸಂಘದ 5ನೇ ವಾರ್ಷಿಕೋತ್ಸವ ಮತ್ತು ವಿಶ್ವ ಆರೋಗ್ಯ ದಿನ ಹಮ್ಮಿಕೊಳ್ಳಲಾಗಿದೆ. ವೈದ್ಯರು ಮತ್ತು ಶುಶ್ರೂಕರನ್ನು ಸನ್ಮಾನಿಸಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷ ಇಂಗಳಗಿ ಪಂಪಾಪತಿ, ಪದಾಧಿಕಾರಿಗಳಾದ ಸೋಮಶೇಖರ ಶ್ರೇಷ್ಠಿ, ಹನುಮಂತಪ್ಪ ಢಣಾಪುರ, ಮಲ್ಲಿಕಾರ್ಜುನ, ಅಂಜನಿ, ಜಗದೀಶ, ಯಲ್ಲಪ್ಪ, ಹನುಮಂತಪ್ಪ, ಹುಲುಗಪ್ಪ ಬಸಾಪಟ್ಟಣ, ರಾಮು, ರಾಜಶೇಖರ್, ಶಿವಪ್ರಕಾಶ ಅಕ್ಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net