ಗಂಗಾವತಿಗೆ ಆಗಮಿಸಿದ ವಿವಿಧ ಭಾಗದ ಜೈನ್ ಮುನಿಗಳನ್ನು ನಗರದ ಜೈನ್ ಸಮಾಜದವರು ಅದ್ದೂರಿಯಾಗಿ ಸ್ವಾಗತಿಸಿದರು. ಜೈನ್ ಮುನಿ ಆಚಾರ್ಯ ವಿಮಲ ಸಾಗರ ಸುರೀಶ್ವರ ಮಹಾರಾಜ್ ನೇತೃತ್ವದ ಮುನಿವರ್ಯರನ್ನು ಕುಂಭದೊಂದಿಗೆ ಸ್ವಾಗತಿಸಲಾಯಿತು. ಜೈನ್ ಸಮಾಜದ ಪ್ರಮುಖರಾದ ಬಾಬುಬಾಲ್ ಬಾಂಠಿ, ಆನಂದ ಛೋಪ್ರಾ, ಮಹಾವೀರ ಜೈನ್ ಇತರರಿದ್ದರು.
Published on:
Copied
Follow Us
ಗಂಗಾವತಿ: ಧರ್ಮ ಮತ್ತು ಅಧ್ಯಾತ್ಮ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ ವಿವಿಧ ಭಾಗದ ಜೈನ್ ಮುನಿಗಳನ್ನು ನಗರದ ಜೈನ್ ಸಮಾಜದವರು ಅದ್ದೂರಿಯಾಗಿ ಸ್ವಾಗತಿಸಿದರು.
ಶಾಂತಿ, ಅಹಿಂಸೆ ಮತ್ತು ಧರ್ಮ ಚಟುವಟಿಕೆಗಳ ವಿಸ್ತರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಜೈನ್ ಮುನಿ ಆಚಾರ್ಯ ವಿಮಲ ಸಾಗರ ಸುರೀಶ್ವರ ಮಹಾರಾಜ್ ನೇತೃತ್ವದ ಮುನಿವರ್ಯರನ್ನು ನಗರದ ಜುಲಾಯಿನಗರದಲ್ಲಿ ವೇದ, ವಾದ್ಯ ೋಷಣೆ ಗಳೊಂದಿಗೆ ಸ್ವಾಗತಿಸಲಾ ಯಿತು. ಗಣೇಶ ವೃತ್ತದಲ್ಲಿ ಕುಂಭದೊಂದಿಗೆ ಬರಮಾಡಿಕೊಂಡ ತೇರಾಪಂಥ ಮಹಿಳಾ ತಂಡದವರು ಸಂಕೀರ್ತನೆ ನೆರವೇರಿಸಿದರು.
ನಗರದ ಪ್ರಮುಖ ವೃತ್ತಗಳ ಮೂಲಕ ಬಸವೇಶ್ವರ ನಗರದ ಸಾಲೇಚ ಭವನದಲ್ಲಿ ಧಾರ್ಮಿಕ ಸಭೆ ಜರುಗಿತು. ಸಮಾಜದ ಸ್ವಾಸ್ತ್ಯ ಕಾಪಾಡಲು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವ ಸಮುದಾಯ ಅಹಿಂಸಾ ಮತ್ತು ಸತ್ಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜೈನ್ ಮುನಿಗಳು ಸಲಹೆ ನೀಡಿದರು.