ಸ್ವಚ್ಛ-ಸುಂದರ ವಾತಾವರಣವಿರಲಿ

1) ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಗ್ರಾಪಂ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ವಿಶೇಷ  ಗ್ರಾಮ ಸಭೆ ನಂತರ ಸಸಿಗಳನ್ನು ನೆಡಲಾಯಿತು. ಪಿಡಿಒ ಸುರೇಶ ಛಲವಾದಿ ಇತರರಿದ್ದರು. 2) ಗಂಗಾವತಿ ತಾಲೂಕಿನ ಹೊಸ ಅಯೋಧ್ಯಾ ಗ್ರಾಮದ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.ತಾಪಂ ಇಒ ರಾಮರೆಡ್ಡಿ ಪಾಟೀಲ್,ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಬಿ.ರಾಘವೇಂದ್ರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ,  ಉಪ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ಭಾಗವತ್, ಗುಂಡಪ್ಪ, ಪಿಡಿಓ ರವೀಂದ್ರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒ ಸುರೇಶ ಛಲವಾದಿ ಸಲಹೆ
  • ಗಂಗಾವತಿ ವಡ್ಡರಹಟ್ಟಿ ವಿಶೇಷ ಗ್ರಾಮಸಭೆ
ಗಂಗಾವತಿ: ತಾಲೂಕಿನ ವಡ್ಡರಹಟ್ಟಿಯ ಗ್ರಾಪಂ ಕಚೇರಿ ಆವರಣದಲ್ಲಿ ಪರಿಸರ ದಿನದ ನಿಮಿತ್ತ ವಿಶೇಷ ಗ್ರಾಮ ಸಭೆ ಜರುಗಿತು.
ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟ ಪಿಡಿಒ ಸುರೇಶ ಛಲವಾದಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಉತ್ತಮ ಆರೋಗ್ಯ ಹೊಂದಲು ನಮ್ಮ ಸುತ್ತಲ್ತೂ ಸ್ವಚ್ಛ, ಸುಂದರ ವಾತಾವರಣ ನಿರ್ಮಿಸುವುದು ಅತ್ಯಗತ್ಯವಾಗಿದೆ ಎಂದರು. ಗ್ರಾಪಂ ಕಾರ್ಯದರ್ಶಿ ಈಶಪ್ಪ, ಕರವಸೂಲಿಗಾರರಾದ ಆಂಜನೇಯ, ರುದ್ರಯ್ಯಸ್ವಾಮಿ, ಸೇರಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿದ್ದರು. ಗ್ರಾಪಂ ಸಿಬ್ಬಂದಿ ಸೇರಿ ಇತರರಿದ್ದರು.
ಹೊಸ ಅಯೋಧ್ಯ: ತಾಲೂಕಿನ ಹೊಸ ಅಯೋಧ್ಯ ಗ್ರಾಮದ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಸಿಗಳನ್ನು ವಿತರಿಸಲಾಯಿತು. ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಭವಿಷ್ಯದ ದಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಬಿ.ರಾಘವೇಂದ್ರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ, ಉಪ ವಲಯ ಅರಣ್ಯ ಅಧಿಕಾರಿಗಳಾದ ಚಂದ್ರಶೇಖರ ಭಾಗವತ್, ಗುಂಡಪ್ಪ, ಪಿಡಿಒ ರವೀಂದ್ರ ಕುಲಕರ್ಣಿ, ಮುಖ್ಯಶಿಕ್ಷಕ ನೀಲಕಂಠಯ್ಯ ಸ್ವಾಮಿ, ಶಿಕ್ಷಕರಾದ ಮಂಜುನಾಥ ಇತರರಿದ್ದರು.
ಢಣಾಪುರ: ತಾಲೂಕಿನ ಢಣಾಪುರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯಶಿಕ್ಷಕ ಹನುಮಂತಪ್ಪ ಚವ್ಹಾಣ ಮಾತನಾಡಿದರು. ಶಿಕ್ಷಕರಾದ ಚಂದ್ರಶೇಖರ ಜಾಪಾಳ, ಜಿ.ಕೋಟೆಪ್ಪ ಸಿದ್ದಲಿಂಗೇಶ್ವರ, ಅಯ್ಯನಗೌಡ , ಚನ್ನಬಸಪ್ಪ , ಸೈಯಾದ ಸನವುಲ್ಲಾ ಖಾನ , ಮಾಲತೇಶ ,ಸುಮಲತಾ , ಗಂಗಮ್ಮ , ಗ್ರಾಮದ ಹಸಿರು ಬಳಗ ಸದಸ್ಯರಾದ, ರಾಘವೇಂದ್ರ, ನಿಂಗರಾಜ ಪಂಪಾಪತಿ, ಗೂಡಪಾಷ, ಬಸವರಾಜ, ಮಂಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net