ಯುವಕರು ಕ್ರೀಡಾಸ್ಫೂರ್ತಿಯಿಂದ ಆಡಲಿ

ಕಲಕೇರಿಯಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಲಕೇರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ ಚಾಲನೆ ನೀಡಿದರು. ಗ್ರಾಪಂ ಮಾಜಿ ಸದಸ್ಯ ನಾಗರಾಜ ಈಡಿಗೇರ, ಶಿಕ್ಷಕರಾದ ಮಂಜುನಾಥ ಇತರರಿದ್ದರು.

Published on
ಕನಕಗಿರಿ: ತಾಲೂಕಿನ ಕಲಕೇರಿ ಗ್ರಾಮದ 43ನೇ ವರ್ಷದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಲಕೇರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ ಚಾಲನೆ ನೀಡಿದರು.
ಯುವಕರಿಗೆ ನೆಚ್ಚಿನ ಕ್ರೀಡೆಯಾಗಿರುವ ಕ್ರಿಕೆಟ್ ಇದೀಗ ಪ್ರತಿ ಗ್ರಾಮದಲ್ಲಿಯೂ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಕ್ರೀಡಾಸ್ಫೂರ್ತಿಯಿಂದ ಆಟವಾಡಿ ಗ್ರಾಮಕ್ಕೆ ಹೆಸರು ತರಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ನಾಗರಾಜ ಈಡಿಗೇರ, ಶಿಕ್ಷಕರಾದ ಮಂಜುನಾಥ, ಪ್ರಮುಖರಾದ ಬೆಟ್ಟಪ್ಪ, ಶಿವಶೇಖರಗೌಡ, ಈಶಪ್ಪ ಗದ್ದಿ, ವಿಜಯ ಹೊಸಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net