ಬಚಾವತ್ ಆಯೋಗದಂತೆ ನೀರು ಹರಿಸಲಿ

ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿ ಮುಂದೆ  ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಪದಾಧಿಕಾರಿಗಳಾದ ಶಂಕರ ಪೂಜಾರಿ, ಹುಸೇನಸಾಬ್, ಭಾರತಿ ಆಗಲೂರು, ಮಾಲಾ ಇತರರಿದ್ದರು.
ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಪದಾಧಿಕಾರಿಗಳಾದ ಶಂಕರ ಪೂಜಾರಿ, ಹುಸೇನಸಾಬ್, ಭಾರತಿ ಆಗಲೂರು, ಮಾಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ
  • ರಕ್ಷಣಾ
  • ವೇದಿಕೆ
ಗಂಗಾವತಿ: ತುಂಗಭದ್ರಾ ಮತ್ತು ಕಾವೇರಿ ಜಲ ವಿವಾದ ರಾಜ್ಯದ ರೈತರ ಹಿತಾಸಕ್ತಿಗೆ ಅನುಗುಣವಾಗಿ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ನಗರ ಮತ್ತು ಗ್ರಾಮೀಣ ಭಾಗದ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಶಿರಸ್ತೇದಾರ್ ಕೃಷ್ಣವೇಣಿಗೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ 35ಟಿಎಂಸಿ ನೀರಿದ್ದರೂ, ವಿಜಯನಗರ ನಗರ ಕಾಲುವೆಗಳಿಗೆ ಬಚಾವತ್ ಆಯೋಗದ ಪ್ರಕಾರ 11ತಿಂಗಳು ನೀರು ಹರಿಸಲು ಅಧಿಕಾರಿಗಳು ಒಪ್ಪುತ್ತಿಲ್ಲ.
0ದಿಂದ 11ಎ ವಿತರಣೆ ಕಾಲುವೆವರೆಗೆ ಕೂಡಲೇ ನೀರು ಹರಿಸಬೇಕಿದ್ದು, ರೈತರ ಹಿತ ಕಾಪಾಡಬೇಕು. ಕಾರ್ಖಾನೆಗೆ ಹರಿಸುತ್ತಿರುವ ನೀರನ್ನು ನಿಯಂತ್ರಿಸಬೇಕಿದ್ದು, ಕಾಲುವೆ ವ್ಯಾಪ್ತಿಯ ರೈತರಿಗೆ ನೀರು ಒದಗಿಸಬೇಕು. ಅದರಂತೆ ತಮಿಳುನಾಡಿಗೆ ನೀರು ಹರಿಸುವ ಕಾವೇರಿ ನೀರು ನಿಯಂತ್ರಣ ಮಂಡಳಿ ನಿರ್ಣಯ ಖಂಡನೀಯವಾಗಿದ್ದು, ರಾಜ್ಯದ ರೈತರ ವಿರೋಧಿ ನಿರ್ಧಾರವಾಗಿದೆ. ಶೇ.70 ಮುಂಗಾರು ಮಳೆಯಾಗಬೇಕಿದ್ದರೂ, ಶೇ.20 ಮಳೆಯಾಗಿದೆ. ನೀರಿನ ಕೊರತೆ ಹೆಚ್ಚಾಗಿದ್ದು, ತಮಿಳುನಾಡುಗೆ ನೀರು ಹರಿಸುವುದು ನ್ಯಾಯಸಮ್ಮತವಲ್ಲ ಎಂದರು.
ಪದಾಧಿಕಾರಿಗಳಾದ ಶಂಕರ ಪೂಜಾರಿ, ಹುಸೇನಸಾಬ್, ಉಮೇಶ ಬಂಡಿ, ಮುತ್ತುರಾಜ್, ಬಸವರಾಜ, ಅಂಜಿ ನಾಯಕ, ಪುಂಡಲೀಕ, ರಮೇಶ, ಭಾರತಿ ಆಗಲೂರು, ಮಾಲಾ, ಸುಮಿತ್ರಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net