ವಿದ್ಯಾರ್ಥಿಗಳು ಇಷ್ಟ ಪಟ್ಟು ಅಭ್ಯಾಸ ಮಾಡಲಿ

ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಟಾರ್ಗೆಟ್40+ ಅನುಷ್ಠಾನದ ಅಂಗವಾಗಿ ಮಕ್ಕಳಿಗೆ ಸರಳ ಗಣಿತ ಚಾರ್ಟ್‌ಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕರಾದ ಗಿರಿಯಪ್ಪ, ರವಿಕಿರಣ್, ಪ್ರಕಾಶರೆಡ್ಡಿ, ಮರ್ದಾನಲಿ, ರಾಜಾಸಾಬ, ಶಾಂತಂವೀರಯ್ಯ, ಸುನೀತಾ ಸೋಮಣ್ಣ, ಪರಶುರಾಮ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಫಲಿತಾಂಶ
  • ಸುಧಾರಣೆಗಾಗಿ
  • ಟಾರ್ಗೆಟ್
ಅಳವಂಡಿ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಸತತ ಅಭ್ಯಾಸ ಮಾಡಿದಾಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂದು ಗಣಿತ ಶಿಕ್ಷಕ ಮರ್ದಾನಲಿ ಗಡಾದ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಟಾರ್ಗೆಟ್ 40+ಅನುಷ್ಠಾನದ ಅಂಗವಾಗಿ ಮಕ್ಕಳಿಗೆ ಸರಳ ಗಣಿತ ಚಾರ್ಟ್ ಗಳನ್ನು ವಿತರಿಸಿ ಶನಿವಾರ ಮಾತನಾಡಿದರು. ಗಣಿತ ಕಷ್ಟದ ವಿಷಯವಲ್ಲ. ಇಷ್ಟ ಪಟ್ಟು ಅಭ್ಯಾಸ ಮಾಡಿದರೆ ಸುಲಭವಾಗುತ್ತದೆ. ಟಾರ್ಗೆಟ್- 40+ ಈಡೇರಬೇಕಾದರೆ ಈ ಚಾರ್ಟ್ ಪರೀಕ್ಷಾ ದೃಷ್ಟಿಯಿಂದ ಅತೀ ಮುಖ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿದರು. ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರವಿಕಿರಣ ಟಿಕಾರೆ, ಪ್ರಕಾಶರೆಡ್ಡಿ ಗೋವಿಂದರೆಡ್ಡಿ, ರಾಜಾಸಾಬ ಬಳಿಗೇರ, ಶಾಂತಂವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ ಸೋಮಣ್ಣ ತಳಕಲ, ಪರಶುರಾಮ ಯಡವಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net