ರೋಗಿಗಳಿಗೆ ಮೂಲ ಸೌಲಭ್ಯ ದೊರೆಯಲಿ

ಯಲಬುರ್ಗಾದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಇನ್ನರ್ ವ್ಹೀಲ್ ಕ್ಲಬ್ನಿಂದ ಎರಡು ಬೆಂಚುಗಳನ್ನು ಕೊಡುಗೆಯಾಗಿ ನೀಡಲಾಯಿತು. ಕ್ಲಬ್‌ನ ಮಾಜಿ ಅಧ್ಯಕ್ಷೆ ಶಕುಂತಲಾದೇವಿ ಮಾಲಿಪಾಟೀಲ್, ಡಾ.ಶಿಲ್ಪಾ, ಡಾ.ವಿವೇಕ್, ಪ್ರಮುಖರಾದ ಸವಿತಾ ಮುರಡಿಮಠ, ನಾಗರತ್ನಾ ನುಲ್ವಿ, ರಾಜಮ್ಮ ಸಂಕನೂರು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷೆ ಚನ್ನಮ್ಮ ಆರ್.ಪಾಟೀಲ ಹೇಳಿಕೆ
ಯಲಬುರ್ಗಾ: ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದು ಇನ್ನರ್ ವ್ಹೀಲ್ ಕ್ಲಬ್‌ನ ಧ್ಯೇಯ ಎಂದು ಅಧ್ಯಕ್ಷೆ ಚನ್ನಮ್ಮ ಆರ್.ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನರ್ ವ್ಹೀಲ್ ಕ್ಲಬ್ನಿಂದ ಬುಧವಾರ ಎರಡು ಬೆಂಚುಗಳನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಕುಟುಂಬಸ್ಥರಿಗೆ ಮೂಲ ಸೌಲಭ್ಯ ದೊರೆಯಬೇಕು. ಸಾರ್ವಜನಿಕ ಸಂಸ್ಥೆಗಳ ಅಭಿವೃದ್ಧಿಗೆ ಸ್ವಯಂಸೇವಾ ಸಂಘಟನೆಗಳು ಕೈಜೋಡಿಸಿದಾಗ ಉತ್ತಮ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಥೆ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಕ್ರಗಳಿಗೆ ಆದ್ಯತೆ ನೀಡುತ್ತದೆ ಎಂದರು.
ಇನ್ನರ್ ವ್ಹೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಶಕುಂತಲಾದೇವಿ ಮಾಲಿಪಾಟೀಲ್, ಡಾ.ಶಿಲ್ಪಾ, ಡಾ.ವಿವೇಕ್, ಆಸ್ಪತ್ರೆಯ ಸಿಬ್ಬಂದಿ, ಪ್ರಮುಖರಾದ ಸವಿತಾ ಮುರಡಿಮಠ, ನಾಗರತ್ನಾ ನುಲ್ವಿ, ರಾಜಮ್ಮ ಸಂಕನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net