ನ್ಯಾಯಮೂರ್ತಿಗಳ ನೇತೃತ್ವದಲ್ಲೇ ತನಿಖೆಯಾಗಲಿ

ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಮನವಿ ಸಲ್ಲಿಸಿತು. ರಾಜ್ಯ ಸಂಚಾಲಕ ಡಿ.ಎಚ್ ಪೂಜಾರ್, ಜಿಲ್ಲಾ ಸಂಚಾಲಕ ಬಸವರಾಜ ನರೆಗಲ್ಲ, ಪದಾಧಿಕಾರಿಗಳಾದ ಮುಖಪ್ಪ ಎಚ್, ರಾಮಪ್ಪ, ಭೀಮಪ್ಪ, ಯಮನೂರಪ್ಪ ಇತರರಿದ್ದರು.
ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಮನವಿ ಸಲ್ಲಿಸಿತು. ರಾಜ್ಯ ಸಂಚಾಲಕ ಡಿ.ಎಚ್ ಪೂಜಾರ್, ಜಿಲ್ಲಾ ಸಂಚಾಲಕ ಬಸವರಾಜ ನರೆಗಲ್ಲ, ಪದಾಧಿಕಾರಿಗಳಾದ ಮುಖಪ್ಪ ಎಚ್, ರಾಮಪ್ಪ, ಭೀಮಪ್ಪ, ಯಮನೂರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪರ
  • ಜಿಲ್ಲಾಧಿಕಾರಿ
  • ಕರ್ನಾಟಕ

ಕೊಪ್ಪಳ:

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಕೊಡುವ ನೆಪದಲ್ಲಿ ನಡೆದ 8.43 ಕೋಟಿ ರೂ. ಬೃಹತ್ ವಂಚನೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಸಿದ್ಧರಾಮೇಶ್ವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸರೋಜಮ್ಮ ಬಡಾವಣೆಯಲ್ಲಿ ನಿವೇಶನ ಕೊಡುವ ನೆಪದಲ್ಲಿ ಸಾರ್ವಜನಿಕರ ಕೋಟ್ಯಂತರ ರೂ. ಲೂಟಿ ಮಾಡಲಾಗಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗುತ್ತಿಗೆ ನೌಕರ ರವೀಂದ್ರ ಕುಮಾರ್ ಅವರನ್ನು ಮುಖ್ಯ ರೂವಾರಿ ಎಂದು ಬಿಂಬಿಸಲಾಗುತ್ತಿದೆ.
ಆದರೆ, ಕೇವಲ ಒಬ್ಬ ಗುತ್ತಿಗೆ ನೌಕರ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ಎಸಗಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಾಧಿಕಾರದ ಮಾಜಿ ಆಯುಕ್ತ ಯೋಗಾನಂದ ಆರ್, ಶ್ರೀವಿಷ್ಣು ಆರ್. ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. 16ವಷರ್ಗಳಿಂದ ಕೆಲಸ ಮಾಡುತ್ತಿರುವ ಈ ನೌಕರನ ಹಿನ್ನೆಲೆ ಗೊತ್ತಿದ್ದರೂ, ಆತನಿಗೆ ಹಣಕಾಸಿನ ಪ್ರಮುಖ ಜವಾಬ್ದಾರಿ ವಹಿಸಿ ಅಕ್ರಮಕ್ಕೆ ದಾರಿ ಮಾಡಿಕೊಡಲಾಗಿದೆ. ಹೊಸಪೇಟೆಯಿಂದ ವರ್ಗಾವಣೆಯಾಗಿ ಬಂದ ಈತನಿಗೆ ನಿಯಮಬಾಹಿರವಾಗಿ ಖಾಯಂ ಆದೇಶ ನೀಡಿರುವುದು ಹಲವಾರು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಪ್ರಸ್ತುತ ರಚಿಸಲಾಗಿರುವ ಧಾರವಾಡ ಹಾಗೂ ಬೆಳಗಾವಿ ಆಯುಕ್ತರ ನೇತೃತ್ವದ ತನಿಖಾ ಸಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು. ರಾಜಕೀಯ ಒತ್ತಡಗಳಿಗೆ ಮಣಿಯದೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲೇ ಸಮಗ್ರ ತನಿಖೆಯಾಗಬೇಕು.
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ 8000 ಅರ್ಜಿದಾರರಿಂದ ಸಂಗ್ರಹಿಸಲಾದ ಅರ್ಜಿ ಶುಲ್ಕವನ್ನು ತಕ್ಷಣವೇ ಫಲಾನುಭವಿಗಳಿಗೆ ಹಿಂತಿರುಗಿಸಬೇಕು. ಮುಖ್ಯ ಆರೋಪಿ ರವೀಂದ್ರ ಕುಮಾರ್ ಹಾಗೂ ಆತನ ಕುಟುಂಬದ ಆಸ್ತಿಯನ್ನು ಜಪ್ತಿ ಮಾಡಿ, ವಂಚನೆಗೊಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಕೆಆರ್‌ಆರ್‌ಎಸ್ ಒತ್ತಾಯಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net